ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಮಲದ ಪಾಲಾದ ಹಿರೇಗುಂಜಳ ಗ್ರಾಮ ಪಂಚಾಯಿತಿ

ಕುಂದಗೋಳ : ತಾಲೂಕಿನ ಹಿರೇಗುಂಜಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಎರೆಡು ಸ್ಥಾನಗಳಲ್ಲೂ ಕಮಲ ಅರಳಿದೆ. ಹಿರೇಗುಂಜಳ, ಚಿಕ್ಕಗುಂಜಳ, ಭಾಗವಾಡ ಮೂರು ಗ್ರಾಮಗಳ 11 ಸದಸ್ಯರ ಪೈಕಿ 9 ಜನ ಸದಸ್ಯರು ಬಿಜೆಪಿ ಬೆಂಬಲಿಸಿದರೆ ಇನ್ನುಳಿದ ಎರೆಡು ಜನ ಸ್ವಂತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಪರಾಜಿತರಾದರು.

ಹಿರೇಗುಂಜಳ ಗ್ರಾಮ ಪಂಚಾಯಿತಿಗೆ ಮೀಸಲಾಗಿದ್ದ ಸಾಮಾನ್ಯ ವರ್ಗದ ಸ್ಥಾನಕ್ಕೆ ದೇವಪ್ಪ ರುದ್ರಪ್ಪ ಅಣ್ಣಿಗೇರಿ ಆಯ್ಕೆಯಾದರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಾ ಕೋಟೆಪ್ಪ ಸಣ್ಣಲಿಂಗಣ್ಣನವರ ಆಯ್ಕೆಯಾದರು. ವಿಜೇತರಿಗೆ ಗ್ರಾಂ.ಪಂ ಸರ್ವ ಸದಸ್ಯರು ಹಾರ ಹಾಕಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಚಂದ್ರಶೇಖರ ಬಿಸಿರೊಟ್ಟಿ, ಬಸವರಾಜ ಸಂಕ್ಲಿಪೂರ, ಅಣ್ಣಪ್ಪಗೌಡ ಪಾಟೀಲ, ಚುನಾವಣಾಧಿಕಾರಿ ಜಿ.ಎನ್.ಮಠಪತಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

03/02/2021 07:06 pm

Cinque Terre

11.5 K

Cinque Terre

0

ಸಂಬಂಧಿತ ಸುದ್ದಿ