ಹುಬ್ಬಳ್ಳಿ: ಸ್ವದೇಶದ ತತ್ವಕ್ಕೆ ಉತ್ತೇಜನಕ್ಕೆ ನೀಡುವ ಮೂಲಕ ಗಾಂಧಿ ಕನಸು ನನಸು ಮಾಡಬೇಕು.ದೇಶದ ಏಕೈಕ ರಾಷ್ಟ್ರ ಧ್ವಜ ಉತ್ಪಾದಿಸುವ ಖಾದಿ ಕೇಂದ್ರ ಈಗ ಸಂಕಷ್ಟದಲ್ಲಿದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,ಶಹೀದ್ ದಿವಸ್' ಅಂಗವಾಗಿ ರಾಷ್ಟ್ರ ಧ್ವಜ ತಯಾರಿಕರನ್ನ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಖಾದಿ- ಉತ್ಪನ್ನ, ಹಾಗೂ ಉತ್ಪಾದಕರಿಗೆ ಮಾನ್ಯತೆ ಸಿಗಬೇಕು ಎಂದರು.
ಧ್ವಜ ಉತ್ಪಾದನೆಯ ಕಾರ್ಮಿಕರಿಗೆ ಎರಡು ತಿಂಗಳ ಆಹಾರದ ಕಿಟ್ ವಿತರಣೆ ಮಾಡಲಾಗುತ್ತದೆ. ಅಲ್ಲದೇ ಖಾದಿ ಉಳಿವಿಗೆ ಸರ್ಕಾರ ಜೊತೆ ಮಾತುಕತೆ ನಡೆಸಲಿದ್ದೇನೆ.ಕೈಮಗ್ಗ- ಉಳಿಯಬೇಕು, ನೇಕಾರರಿಗೆ ಕನಿಷ್ಠ ವೇತನ ನಿಗದಿಯಾಗಬೇಕು.ಖಾದಿ- ನೇಕಾರರ ಸಮಸ್ಯೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಅವರು ಹೇಳಿದರು.
ದೇವಸ್ಥಾನದಲ್ಲಿ ಹುಂಡಿ ಇಟ್ಟಂತೆ- ರೈತರಿಗೆ ಹುಂಡಿ ಇಡಬೇಕು ಎಂಬ ಕಲ್ಪನೆ ನನ್ನದು ಎಂದ ಅವರು,ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ- ಸದಾನಂದ ಗೌಡ ಸೇರಿದಂತೆ ಹಲವರಿಗೆ ಪತ್ರ ಬರೆಯಲಾಗಿದೆ ಎಂದು ರೈತರ ಕಷ್ಟಗಳ ಕುರಿತು ಮಾಹಿತಿ ನೀಡಿದರು.
Kshetra Samachara
30/01/2021 11:20 am