ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈತರ ಮೇಲೆ ಲಾಠಿ ಪ್ರಯೋಗ ಸರಿಯಲ್ಲ- ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ- ಭೂ ಕಾಯ್ದೆ ಹಿಂಪಡೆಯಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹೋರಾಟ ಮಾಡುವಾಗ, ಯಾವುದೇ ಸರ್ಕಾರ ಸ್ವಪ್ರತಿಷ್ಟೆ ಮಾಡಿಕೊಳ್ಳಬಾರದು. ತಕ್ಷಣ ಕಾಯ್ದೆ ಹಿಂದಕ್ಕೆ ಪಡೆದರೆ ದೇಶಕ್ಕೆ ಒಳೆಯದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.

ನಗರದಲ್ಲಿ ಜೆಡಿಎಸ್ ರೈತ ಪರ ಸಂಘಟನೆಗಳೊಂದಿಗೆ ಗ್ಲಾಸ್ ಹೌಸ್ ನಿಂದ ಅಂಬೇಡ್ಕರ್ ಸರ್ಕಲ್ ಮೂಲಕ ಚೆನ್ನಮ್ಮ ಸರ್ಕಲ್ ವರೆಗೂ ರ‌್ಯಾಲಿಯಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ರಾಜಕಾರಣ ಮಾಡುವುದು ಅವಶ್ಯಕತೆ ಇಲ್ಲ. ಪ್ರಾಮಾಣಿಕತೆ ಇದ್ದವರು ರೈತರನ್ನು ಬೆಂಬಲಿಸಬೇಕು. ಕೇವಲ ರಾಜಕೀಯಕ್ಕಾಗಿ‌, ಓಟ್ ಗಾಗಿ ರಾಜಕೀಯ ‌ಮಾಡಬಾರದು ಎಂದು ರೈತರ ಮೇಲಿನ ಲಾಠಿ ಪ್ರಯೋಗಕ್ಕೆ ಬಸವರಾಜ್ ಹೊರಟ್ಟಿ‌‌ ಕಿಡಿಕಾರಿದರು.

ಕೃಷಿ ಕಾಯ್ದೆ ವಿರೋಧಿಸಿ ರೈತರು ರ‌್ಯಾಲಿ ನಡೆಸುತ್ತಿದ್ದಾರೆ.

ಆದ್ರೆ ದೆಹಲಿಯಲ್ಲಿ ನಡೆಯಿತ್ತಿರುವ ಟ್ರ್ಯಾಕ್ಟರ್ ರ‌್ಯಾಲಿ ತಡೆಗಟ್ಟಲು ಪೊಲೀಸರು ಅಶ್ರುವಾಯು ಪ್ರಯೊಗ ಲಾಠಿ ಪ್ರಯೋಗ ಸರಿಯಲ್ಲ. ಈ ಸರ್ಕಾಗಳು ಯಾವಾಗಲು ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಕಿಡಿಕಾರಿ, ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

Edited By : Nagesh Gaonkar
Kshetra Samachara

Kshetra Samachara

26/01/2021 02:48 pm

Cinque Terre

41.12 K

Cinque Terre

6

ಸಂಬಂಧಿತ ಸುದ್ದಿ