ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಆದಿಬಣಜಿಗ ಜನಾಂಗಕ್ಕೆ ಪ್ರವರ್ಗ -2 ' ಎ ' ಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ

ನವಲಗುಂದ : ಆದಿ ಬಣಜಿಗ ಜನಾಂಗಕ್ಕೆ ಪ್ರವರ್ಗ -2 ' ಎ ' ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಮಂಗಳವಾರ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ವತಿಯಿಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಇನ್ನು ನವಲಗುಂದ ಪಟ್ಟಣದ ಗಣಪತಿ ದೇವಸ್ಥಾನದಿಂದ ತಾಲೂಕು ಪಂಚಾಯತ್ ವರೆಗೆ ಪಾದಯಾತ್ರೆ ಮೂಲಕ ತೆರಳಿದ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಸದಸ್ಯರು ನವಲಗುಂದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರಿಗೆ ಮನವಿ ನೀಡಿದರು.

ಇನ್ನು ಈ ವೇಳೆ ರಾಜ್ಯಧ್ಯಕ್ಷ ಸದಾಶಿವ ಕಾರಡಗಿ, ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಗುರನಳ್ಳಿ, ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಮೆಟ್ಟಿ, ತಾಲೂಕ ಅಧ್ಯಕ್ಷ ಬಸವರಾಜ ಪಿರಣ್ಣವರ, ಅಶೋಕ ಸೋಮಾಪುರ, ಈರಣ್ಣ ಶಿಶುವಿನಹಳ್ಳಿ ಸೇರಿದಂತೆ ಹಲವರು ಇದ್ದರು.

Edited By : Nagesh Gaonkar
Kshetra Samachara

Kshetra Samachara

26/01/2021 02:43 pm

Cinque Terre

17.79 K

Cinque Terre

0

ಸಂಬಂಧಿತ ಸುದ್ದಿ