ಧಾರವಾಡ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಸಮಾಜದ ಗಣ್ಯರನ್ನು ಭೇಟಿ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡು ನಿಧಿ ಸಂಗ್ರಹಿಸಿದರು.
ಸೌಹಾರ್ದ ಪ್ರತೀಕವಾಗಿ ಧಾರವಾಡದ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಸ್ಟೀವ್ ಅಬ್ರಹಾಂ 1 ಲಕ್ಷ ರೂಪಾಯಿ ಹಾಗೂ ರಾಜ್ಯ ನೌಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ 1 ಲಕ್ಷ ಹಾಗೂ ಮಧು ಸೂದನ್ ಕುಲಕರ್ಣಿ 50,000 ರವಿ ದೇಶಪಾಂಡೆ 50,000 ನಿಧಿ ಸಮರ್ಪಣೆ ಮಾಡಿದರು.
ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಶ್ರೀರಾಮ ಭಾರತದ ಅಸ್ಮಿತೆಯಾಗಿದ್ದು, ಎಲ್ಲಾ ಧರ್ಮದ ಜನ ಒಗ್ಗೂಡಿ ಭವ್ಯವಾದ ಮಂದಿರ ನಿರ್ಮಾಣ ಮಾಡಬೇಕು. ಎಲ್ಲಾ ಜನತೆ ಈ ಭವ್ಯ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಹಾಗೂ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಈ ಘಳಿಗೆಗಳು ಅಜರಾಮರವಾಗುವವು ಎಂದು ಜೋಶಿ ಅವರು ಇದೇ ವೇಳೆ ತಿಳಿಸಿದರು.
ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಡಾ.ಎಸ್.ಆರ್. ರಾಮನಗೌಡರ, ಈರೇಶ ಅಂಚಟಗೇರಿ, ಪೂರ್ಣಾ ಪಾಟೀಲ್ ವಿಜಯಾನಂದ ಶೆಟ್ಟಿ ಸೇರಿದಂತೆ ಹಲವರು ಇದ್ದರು.
Kshetra Samachara
16/01/2021 02:48 pm