ಹುಬ್ಬಳ್ಳಿ- ಭಾರತೀಯ ಜನತಾ ಪಕ್ಷದವ ಆರ್‌ಎಸ್‌ಎಸ್ ಅವರು ಹೇಳಿದ ಹಾಗೆ ಕುಣಿಯುತ್ತಿದ್ದಾರೆ. ಒಂದು ರೀತಿ ಕೈಗೊಂಬೆಯಾಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಕಾಂಗ್ರೆಸ್ ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, 370 ರದ್ದು ಮಾಡಿ ಅಂದ್ರು, ಇವರು ಮಾಡಿದ್ರು. ಇದರಿಂದಾಗಿ ಸಂವಿಧಾನಕ್ಕೆ ಅಪಾಯ ಬಂದಿದೆ, ಪ್ರಜಾಪ್ರಭುತ್ವ, ದೇಶದ ಆರ್ಥಿಕತೆಗೆ ಅಪಾಯ ಬಂದಿದೆ. ದೇಶದ ಉಳುವಿಗೆ ಇರೋದು ಕಾಂಗ್ರೆಸ್ ಪಕ್ಷ ಮಾತ್ರ. ಕಾಂಗ್ರೆಸ್ ಅಂದ್ರೆ ಹೋರಾಟ, ಹೋರಾಟ ಅಂದ್ರೆ ಕಾಂಗ್ರೆಸ್. ತ್ಯಾಗ ಬಲಿದಾನ ಮಾಡಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡವರನ್ನು ಬಿಜೆಪಿಯಲ್ಲಿ ಒಬ್ಬರನ್ನು ತೋರಿಸಿ ಎಂದರು.
ದೇಶದ ಏಕತೆಗಾಗಿ ಇಂದಿರಾ ಗಾಂಧಿ ಪ್ರಾಣ ಕಳೆದುಕೊಂಡರು. ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವ ಇದ್ಯಾ? ಕಾಂಗ್ರೆಸ್ ಇತಿಹಾಸ ಸಂವಿಧಾನದ ದೇಯೋದ್ಧೇಶಗಳು. ಸರ್ವ ಧರ್ಮದ ಪರವಾಗಿ ನಾವಿದ್ದೀವಿ. ಭಾರತ ಹಿಂದು ರಾಷ್ಟ್ರ ಅಲ್ಲವೇ? ಹಿಂದು ರಾಷ್ಟ್ರ ಮಾಡುತ್ತೇವೆ ಅಂತಾರೆ. ಇಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಇಲ್ಲವೇ? ಇವರಷ್ಟೇ ಹಿಂದುಗಳಾ? ನಾವ್ಯಾರೂ ಹಿಂದುಗಳಲ್ಲವೇ? ಗಾಂಧಿಜೀಯವರು ಅಲ್ವಾ? ಸುಮ್ಮನೆ ಅಪಪ್ರಚಾರ ಮಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಗೋ ಹತ್ಯೆ ಕಾನೂನಿನ ವಿರೋಧಿ ಅಂತಾರೆ. ರೈತರಿಗೆ ಜಾನುವಾರುಗಳಿಗೆ ಸಂಬಂಧವಿದೆ. ಸ್ವಾರ್ಥಕ್ಕಾಗಿ ಗೋಹತ್ಯೆ ಕಾನೂನು ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ನವರು ಸಂಕ್ರಾಂತಿಗೆ ಕಿಚ್ಚು ಹಾಸೋಕೆ ಬರ್ತಾರಾ? ಇದೆಲ್ಲವನ್ನೂ ನಾವೇ ಮಾಡುತ್ತೇವೆ. ಗೋವುಗಳ ಆರೈಕೆ ಮಾಡದೇ ಇರುವವರು ಉಪದೇಶ ಮಾಡುವುದಕ್ಕೆ ಬರುತ್ತಾರೆ. ಮೋದಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ್ರು. ಇರುವ ಉದ್ಯೋಗಗಳು ಕಳೆದುಹೋಗುತ್ತಿವೆ. ಮೋದಿ ಯಾವತ್ತಾದರೂ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರಾ? ದೇಶದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ದರ ಹೆಚ್ಚಳ ಆಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಿದೆ ಎಂದರು.
Kshetra Samachara
11/01/2021 09:53 pm