ಹುಬ್ಬಳ್ಳಿ: ಬಿಜೆಪಿ ಹಾಗೂ ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನು ವಿರೋಧಿಸುವುದು ಬೇಡ. ವಿಜ್ಞಾನಿಗಳಿಗೆ ಅಗೌರವ ತೋರುವುದು ಬೇಡ ಎಂದು ಕಾಂಗ್ರೆಸ್ಸಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿವಿ ಮಾತು
ಹೇಳಿದರು.
ವ್ಯಾಕ್ಸಿನ್ ಮೊದಲು ಪ್ರಧಾನಿ-ಸಚಿವರು ತೆಗೆದುಕೊಳ್ಳಬೇಕು ಎಂಬ ಕಾಂಗ್ರೆಸ್ ವ್ಯಂಗ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿಗಳು ದೆಹಲಿಗೆ ತೆರಳಿದ್ದಾರೆ.ಸಿಎಂ ಮತ್ತು ರಾಷ್ಟ್ರೀಯ ನಾಯಕರು ಕೂತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು ವರಿಷ್ಠರಿಗೆ ಗೊತ್ತಿದೆ ಎಂದರು.
ಬಿಜೆಪಿ 30 ಪರ್ಸೆಂಟ್ ಸರ್ಕಾರ ಎಂಬ ಕಾಂಗ್ರೆಸ್ಸಿಗರ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಕಾಂಗ್ರೆಸ್ ಬಗ್ಗೆ ಮಾತನಾಡುವುದು ಅಪ್ರಸ್ತುತ ಹಾಗೂ ಅಪಹಾಸ್ಯ ಎಂದು ಟಾಂಗ್ ನೀಡಿದರು.
ಇದೇ 16 ಹಾಗೂ 17 ರಂದು ಕೇಂದ್ರದ ವರಿಷ್ಠರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.ಗೃಹ ಇಲಾಖೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಬಳಿಕ 17 ರಂದು ಬೆಳಗಾವಿಯಲ್ಲಿ ಜನಸೇವಕ ಸಮಾವೇಶದ ಸಮಾರೋಪದಲ್ಲಿ ಭಾಗಿಯಾಗಲಿದ್ದಾರೆ.ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ.ಜನವರಿ 30 ರಂದು ಸರ್ವ ಪಕ್ಷದ ಸಭೆಯ ನಡೆಯಲಿದೆ.ಮಾರ್ಚ್ 8- ಏಪ್ರಿಲ್ -8 ಬಜೆಟ್ ಎರಡನೇ ಸೆಷನ್ ನಡೆಯಲಿದೆ. ಅಲ್ಲದೇ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ.ಕರ್ನಾಟಕದ ಆದ್ಯತೆ ಪಟ್ಟಿಯನ್ನ ಕೇಂದ್ರಕ್ಕೆ ನೀಡಲಾಗಿದೆ ಎಂದರು.
Kshetra Samachara
10/01/2021 01:43 pm