ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಜನ ಮೆಚ್ಚಿದ ಮಾವನ ಅಭಿವೃದ್ಧಿ ಕಾರ್ಯ ಸೊಸೆಗೆ ಗ್ರಾ.ಪಂ ವಿಜಯದ ಜೈಕಾರ

ಕುಂದಗೋಳ : ಇಲ್ಲೋಬ್ರೂ ನಿಸ್ವಾರ್ಥವಾಗಿ ಗ್ರಾಮದ ಸೇವೆ ಸಾಮಾಜಿಕ ಕಾರ್ಯ ಗ್ರಾಮಕ್ಕಿರುವ ಕುಂದು ಕೊರತೆಗಳ ವಿರುದ್ಧ ಹೋರಾಡಿ ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕಾಯಕಕ್ಕೆ ಸ್ವತಃ ಗ್ರಾಮಸ್ಥರ ಒಮ್ಮತದ ಮತದಾನದಿಂದ ಪಂಚಾಯಿತಿ ಸದಸ್ಯತ್ವದ ಗದ್ದುಗೆ ಓಲಿದು ಬಂದಿದೆ.

ಆ ಮೂಲಕ ತಮ್ಮೂರಿನ ಜನರ ಸೇವೆಗೆ ಹೊಸ ಅವಕಾಶದ ಬಾಗಿಲನ್ನು ತೆರೆದಂತಾಗಿದೆ.

ಎಸ್, ! ಇದ್ಯಾರಪ್ಪಾ ಅಂದ್ರಾ ? ಇವ್ರೇ ಸ್ವಾಮಿ ರೈತ ಹೋರಾಟಗಾರ, ಸಾವಯವ ಕೃಷಿಕ, ಸಮಾಜಮುಖಿ ಕೆಲಸಗಾರ ಬಸವರಾಜ ಯೋಗಪ್ಪನವರ ತನ್ನ ಅಂಗವೈಕಲ್ಯವನನ್ನು ಮರೆತು ಗ್ರಾಮದ ಅಭಿವೃದ್ಧಿಗೆ ದುಡಿಯುವ ಇವರ ಶ್ರಮಕ್ಕೆ ಸ್ವತಃ ಗ್ರಾಮಸ್ಥರೇ, ಈ ಬಾರಿ ಇವರ ಕುಟುಂಬಸ್ಥರನ್ನು ಪಂಚಾಯಿತಿ ಎಲೆಕ್ಷನ್'ಗೆ ನಿಲ್ಲಿಸಿ ಶ್ರೀಮತಿ ವಿಶಾಲಾ ಭರತೇಶ ಯೋಗಪ್ಪನವರನ್ನು 222 ಬಹುಮತಗಳ ಅಂತರದಿಂದ ಆಯ್ಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ತಾನೊಬ್ಬ ಹುಟ್ಟು ಹೋರಾಟಗಾರ ನನಗೆ ಅಧಿಕಾರದ ಅಮಲು ಬೇಡಾ, ಅವಕಾಶವನ್ನು ನನ್ನ ಕುಟುಂಬಸ್ಥರಿಗೆ ನೀಡಿ ಅವರಿಂದ ತಪ್ಪಾದಲ್ಲಿ ಮುಂಗೈ ಹಿಡಿದು ಕೇಳಲು ನನಗೆ ಅವಕಾಶ ಮಾಡಿಕೊಡಿ ಎಂದು ಅಧಿಕಾರ ತ್ಯಜಿಸಿ ಮತ್ತೆ ಸಾಮಾನ್ಯನಾಗಿ ಗ್ರಾಮದಲ್ಲಿ ಇದ್ದು ಗ್ರಾ.ಪಂ ಸದಸ್ಯತ್ವಕ್ಕೆ ಸೊಸೆಗೆ ಬೆನ್ನೆಲುಬಾದವರೇ ಈ ಬಸವರಾಜ ಯೋಗಪ್ಪನವರ.

ತಮ್ಮೂರಿನ ಅಭಿವೃದ್ಧಿಗೆ ಹಿರಿಯರ ಸಹಕಾರ, ಗ್ರಾಮದ ಪ್ರತಿ ಬೀದಿಗಳ ಅಭಿವೃದ್ಧಿ ತಮ್ಮೂರನ್ನ ಸುವರ್ಣ ಗ್ರಾಮ ಮಾಡಲು ಮುಂದಾದ ಮಾವ ಸೊಸೆ ಬಾಂಧವ್ಯಕ್ಕೆ ಜನತೆ ಏನು ಹೇಳಿದ್ರೂ ಗೊತ್ತಾ ?

ಓಹ್. ಬಂದ್ ಅಧಿಕಾರ ತ್ಯಜಿಸಿ ಸಾಮಾನ್ಯನಾಗಿ ಉಳಿದ ಮಾವ, ಗ್ರಾಮದ ಅಭಿವೃದ್ಧಿ ಕನಸನ್ನು ಹೊತ್ತ ಸೊಸೆ ಇವರಿಬ್ಬರ ಭಾಂದವ್ಯದಲ್ಲಿ ಮುಂಬರುವ 5 ವರ್ಷಗಳ ಅವಧಿಯಲ್ಲಿ ಗುಡೇನಕಟ್ಟಿ ಗ್ರಾಮ ಸುವರ್ಣ ಗ್ರಾಮವಾಗೋದು ಖಾತ್ರೀ ಬಿಡಿ.

ಜಾಹೀರಾತಿಗೆ ಸಂಪರ್ಕಿಸಿ 8050457426

Edited By : Nagesh Gaonkar
Kshetra Samachara

Kshetra Samachara

05/01/2021 06:13 pm

Cinque Terre

51.06 K

Cinque Terre

1

ಸಂಬಂಧಿತ ಸುದ್ದಿ