ಧಾರವಾಡ: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷಗಳು ಇರುವುದಿಲ್ಲ. ಆದರೆ ಆಯಾ ಪಕ್ಷಗಳು ಅಭ್ಯರ್ಥಿಗಳು ತಾವು ಆ ಪಕ್ಷದ ಬೆಂಬಲಿತ ಅಭ್ಯರ್ಥಿ ಈ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಾರೆ.
ಇದೀಗ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರ ಬಿದ್ದಿದ್ದು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಪಂಚಾಯ್ತಿಯ ಬರೋಬ್ಬರಿ 22 ಜನ ಗ್ರಾಮ ಪಂಚಾಯ್ತಿ ಸದಸ್ಯರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಮಲ ಮುಡಿದಿದ್ದಾರೆ. ನರೇಂದ್ರ ಗ್ರಾಮ ಪಂಚಾಯ್ತಿಗೆ ಒಟ್ಟು 26 ಸದಸ್ಯ ಸ್ಥಾನಗಳಿದ್ದು, ಅದರಲ್ಲಿ 22 ಜನ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಶಾಸಕ ಅಮೃತ ದೇಸಾಯಿ ಅವರು, ಈ 22 ಜನರಿಗೆ ಶಾಲು ಹೊದಿಸಿ, ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಆತ್ಮಾನಂದ ಹುಂಬೇರಿ, ಮಲ್ಲವ್ವ ವಾಲೀಕಾರ, ಮುತ್ತು ಕೆಲಗೇರಿ, ಮಂಜುಳಾ ತೇಗೂರ, ನಾಗರಾಜ ಹೊಟ್ಟಿಹೊಳಿ, ರಾಯನಗೌಡ ಪಾಟೀಲ, ತಿರಕಯ್ಯ ಹಿರೇಮಠ, ನೀಲವ್ವ ನೇಕಾರ, ಶಂಕ್ರೆವ್ವ ಹಡಪದ, ಬಸವರಾಜ ಪಮ್ಮಣ್ಣವರ, ಕಲ್ವವ್ವ ತಿಪ್ಪಣ್ಣವರ, ಅಪ್ಪಣ್ಣ ಹಡಪದ, ಗಂಗವ್ವ ಮಾಯಣ್ಣವರ, ಲಕ್ಷ್ಮೀ ಶಿಂಧೆ, ನೇತ್ರಾ ಚಲವಾದಿ, ಸಂಗಪ್ಪ ಆಯಟ್ಟಿ, ಶಾಂತವ್ವ ಗಾಣಿಗೇರ, ಈಶ್ವರ ತೋಟಗೇರ, ಶಾಂತವ್ವ ಮಲ್ಲನಗೌಡ ಪಾಟೀಲ, ಅರ್ಜುನಗೌಡ ಪಾಟೀಲ, ಶಾಂತವ್ವ ಬಸನಗೌಡ ಪಾಟೀಲ, ಲಕ್ಷ್ಮೀ ಮಂಜುನಾಥ ಅಂಗಡಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಲ್ಲಾ ಬಿಜೆಪಿ ಗ್ರಾಮಾಂತರ ಘಟಕದ ಯುವ ಮೋರ್ಚಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ, ಚನ್ನವೀರಗೌಡ ಪಾಟೀಲ, ಶ್ರೀಕಾಂತ ಮುತಾಲಿಕ ದೇಸಾಯಿ, ವಿಜಯ ದೇಶಮುಖ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.
Kshetra Samachara
02/01/2021 08:07 pm