ಹುಬ್ಬಳ್ಳಿ: ಮೂರು ಸಾವಿರ ಮಠದ ಆಸ್ತಿಯನ್ನು, ಕೆಎಲ್‌ಇ ಸಂಸ್ಥೆಗೆ ದಾನ ವಾಗಿ ಕೊಟ್ಟಿರೊದು ಕಾನೂನು ಬಾಹಿರ ಎಂದು, ಮೂರು ಸಾವಿರ ಮಠದ ಭಕ್ತ ಆನಂದಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು..
ಈಗಿನ ಗುರುಸಿದ್ದ ಸ್ವಾಮೀಜಿಗಳು, ಕೆಎಲ್ಇಯವರು ಭೂಮಿ ಪೂಜೆ ಮಾಡಿದ್ದಾರೆ. ಅದು ಕೂಡ ಕಾನೂನು ಬಾಹಿರವಾಗಿದೆ, ಇಲ್ಲಿ ರಾಜಕೀಯ ದುರ್ಬಳಕೆ ಆಗುತ್ತಿದೆ.
ಉಚಿತವಾಗಿ ಸೇವೆ ನೀಡುತ್ತೇವೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತೇವೆ ಎಂದಿಲ್ಲ. ಮಠದ ಜಾಗ ಪಡೆದು ಕೆಎಲ್ಇಯವರು ಬ್ಯುಸಿನೆಸ್ ಮಾಡುತ್ತಿದ್ದಾರೆ.
ಕೂಡಲೇ ಮಠದ ಆಸ್ತಿಯನ್ನು ಸ್ವಾಮೀಜಿಗಳು ವಾಪಸ್ ಪಡೆಯಬೇಕು. ಮರ್ಯಾದೆಯಾಗಿ ಕೆಎಲ್ಇ ಸಂಸ್ಥೆಯು, ಮಠದ ಆಸ್ತಿಯನ್ನು ವಾಪಸ್ ನೀಡಬೇಕೆಂದು
ಕೆಎಲ್ಇ ಸಂಸ್ಥೆ ವಿರುದ್ಧ ಮಠದ ಭಕ್ತ ಆನಂದಯ್ಯ ಆಕ್ರೋಶ ಹೊರಹಾಕಿದರು.
Kshetra Samachara
26/12/2020 12:13 pm