ಧಾರವಾಡ: ಮಸೀದಿ ಮೇಲೆ ಹಾಕಲಾಗಿರುವ ಮೈಕ್ ನಿಷೇಧಿಸಬೇಕು ಇಲ್ಲವೇ ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು ಎಂದು ಕಳೆದ 6 ತಿಂಗಳ ಹಿಂದೆ ಶ್ರೀರಾಮ ಸೇನೆ ಸಂಘಟನೆಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಮಸೀದಿಗಳಿಂದ ಬರುತ್ತಿರುವ ಶಬ್ದವನ್ನು ತಡೆಗಟ್ಟುವ ಸಂಬಂಧ ಶಬ್ದ ಮಾಲಿನ್ಯ ತಡೆಗಟ್ಟುವ ಇಲಾಖೆಗೆ ಮನವಿ ಕೊಟ್ಟಿದ್ದೇವೆ. ಅವರೂ ಕ್ಯಾರೆ ಎಂದಿಲ್ಲ. ಈ ಸಂಬಂಧ ಮತ್ತೆ ನಾವು ಡಿಸಿ ಅವರಿಗೂ ಮನವಿ ಕೊಡಲಿದ್ದೇವೆ. ಈ ಮೂಲಕ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಲಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ.
ಇಂತಿಷ್ಟೆ ಡಿಸಿಬಲ್ ಸೌಂಡ್ ಇಡಬೇಕು ಹಾಗೂ ಮೈಕ್ ಅಳವಡಿಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ಆದೇಶವಿದೆ. ಈ ಆದೇಶ ಪಾಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಸರ್ಕಾರ ಹೇಳಬೇಕಿದೆ. ಅವರ ಪ್ರಾರ್ಥನೆಗೆ ನಮ್ಮ ಅಡ್ಡಿ ಇಲ್ಲ, ಮೈಕ್ ಮತ್ತು ಶಬ್ದಕ್ಕೆ ಅಡ್ಡಿ ಇದೆ. ಜಿಲ್ಲಾಧಿಕಾರಿಗಳಿಗೆ ಇದು ಕೊನೆಯ ಎಚ್ಚರಿಕೆ. ಕೋರ್ಟ್ ಆರ್ಡರ್ ಉಲ್ಲಂಘನೆ ಆಗುತ್ತಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಾಗುತ್ತಿಲ್ಲವೇ? ಕೋರ್ಟ್ ಆದೇಶದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6ರವೆಗೆ ಮೈಕ್ ಹಚ್ಚಬಾರದು. ಸರ್ಕಾರದ ಅನುಮತಿ ತೆಗೆದುಕೊಂಡು ಮೈಕ್ ಹಚ್ಚಬೇಕಿದೆ. ಶಬ್ದ ಎಷ್ಟು ಇರಬೇಕು ಎಂಬುದು ಕೂಡ ಆದೇಶದಲ್ಲಿದೆ ಇದನ್ನು ಮುಸ್ಲಿಂರು ಪಾಲಿಸುತ್ತಿಲ್ಲ ಎಂದು ಮುತಾಲಿಕ್ ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2022 09:39 pm