ಶಾಸಕ ಅರವಿಂದ ಬೆಲ್ಲದ ಮಾಲಿಕತ್ವದ ಕಾರು ಷೋ ರೂಮ್ ಆವರಣದಲ್ಲಿ ನೀರಿನ ಪೈಪ್‌ಲೈನ್ ಹಾದು ಹೋಗಿದ್ದರ ಕುರಿತು ಧ್ವನಿ ಎತ್ತಿದ್ದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರ ಮೇಲೆ ಇದೀಗ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆ ನಡೆದು ಎರಡೂವರೆ ತಿಂಗಳ ನಂತರ ದೂರು ದಾಖಲಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಶಾಸಕ ಅರವಿಂದ ಬೆಲ್ಲದ ಮಾಲಿಕತ್ವದ ಕಾರು ಷೋ ರೂಮ್ ಆವರಣದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿದೆ. ಈ ಪೈಪ್‌ಲೈನ್ ಹಾದು ಹೋದ ಜಾಗವನ್ನು ಬೆಲ್ಲದ ಷೋ ರೂಮ್‌ನವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಧ್ವನಿ ಎತ್ತಿದ್ದರು. ಅಲ್ಲದೇ ಬೆಲ್ಲದ ಷೋ ರೂಮ್ ಆವರಣದಲ್ಲಿದ್ದ ಪೈಪ್‌ಲೈನ್ ಒಡೆದಿದ್ದ ಸಂದರ್ಭದಲ್ಲಿ ಗೌರಿ ಹಾಗೂ ಇನ್ನಿತರರು ಷೋ ರೂಮ್‌ಗೆ ಹೋಗಿ ತಕರಾರು ಮಾಡಿದ್ದರು. ಈ ಘಟನೆ ನಡೆದು ಎರಡೂವರೆ ತಿಂಗಳ ನಂತರ ನಾಗರಾಜ ಗೌರಿ ಹಾಗೂ ಇನ್ನಿತರರ ಮೇಲೆ ಷೋ ರೂಮ್ ಮ್ಯಾನೇಜರ್ ದೂರು ದಾಖಲಿಸಿದ್ದಾರೆ. ಈ ದೂರನ್ನು ಉದ್ದೇಶಪೂರ್ವಕವಾಗಿ ಬೆಲ್ಲದ ಅವರು ದಾಖಲಿಸಿದ್ದಾರೆ ಎಂದು ನಾಗರಾಜ ಗೌರಿ ಆರೋಪಿಸಿದ್ದಾರೆ.
ನೀರಿನ ಪೈಪ್‌ಲೈನ್ ಒಡೆದು ಸಾರ್ವಜನಿಕರು ತೊಂದರೆಪಡುತ್ತಿದ್ದಾಗ ಅದನ್ನು ಕೇಳಲು ಹೋದರೆ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ಶಾಸಕರ ಷೋ ರೂಮ್‌ನವರು ಪೈಪ್‌ಲೈನ್ ಜಾಗವನ್ನು ಅತಿಕ್ರಮಣ ಮಾಡಿದ್ದರು. ಅದೇ ಜಾಗದಲ್ಲಿ ನೀರಿನ ಪೈಪ್‌ಲೈನ್ ಒಡೆದಿದ್ದರಿಂದ ಅದನ್ನು ಸರಿಪಡಿಸುವಂತೆ ನಾವು ಹೋಗಿದ್ದೆವು. ಈ ಸಂಬಂಧ ಎಲ್ ಆ್ಯಂಡ್ ಟಿ ಕಂಪೆನಿ ಜೊತೆಗೂ ನಾನು ಮಾತನಾಡಿದ್ದೆ. ಶಾಸಕರು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ನೂರು ಕೇಸ್ ದಾಖಲಿಸಿದರೂ ನಾನು ಜನಪರವಾಗಿರುತ್ತೇನೆ ಎಂದು ಗೌರಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/09/2022 05:10 pm