ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಂದು ತಿಂಗಳಾದರೂ ಶಾಂತಿಯಿಂದ ಇರೋಣ: ಇಸ್ಮಾಯಿಲ್

ಮುಸಲ್ಮಾನರು ಪವಿತ್ರ ರಂಜಾನ್ ಹಬ್ಬ ಹಾಗೂ ಹಿಂದೂಗಳು ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಾದರೂ ಎಲ್ಲರೂ ಶಾಂತಿಯಿಂದ ಇರೋಣ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹೇಳಿದ್ದಾರೆ.

ಸರ್ಕಾರಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ, ಮುಸ್ಲಿಂ ಆಚರಣೆ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಬೇಡ. ಮಸೀದಿ, ಚರ್ಚ್ ಹಾಗೂ ಮಂದಿರಗಳಲ್ಲಿ ಧ್ವನಿವರ್ಧಕ ಬಳಸುವುದಕ್ಕೆ ಸುಪ್ರೀಂ ಕೋರ್ಟ್‌ನ ಒಂದು ನಿಯಮವಿದೆ. ಇಂತಿಷ್ಟೆ ಡೆಸಿಬಲ್ ಮೇಲೆ ಧ್ವನಿವರ್ಧ ಹಚ್ಚಬೇಕು ಎಂಬ ನಿಯಮವಿದೆ. ಅದನ್ನು ಎಲ್ಲ ಧರ್ಮದವರೂ ಪಾಲನೆ ಮಾಡಬೇಕು. ಕೇವಲ ಅದು ಒಂದು ಧರ್ಮಕ್ಕೆ ಮಾತ್ರ ಸೀಮಿತವಾದರೆ ತಪ್ಪು. ಎಲ್ಲರೂ ಈ ಆದೇಶ ಪಾಲನೆ ಮಾಡಲಿ ಎಂದರು.

ಪ್ರಮೋದ ಮುತಾಲಿಕ ಅವರ ವ್ಯಕ್ತಿತ್ವವೇ ಷಡ್ಯಂತರ ಮಾಡುವುದು. ಹಿಜಾಬ್, ಮಾಂಸ ಮಾರಾಟ ಮುಗಿದಿದೆ. ಇದೀಗ ಧ್ವನಿವರ್ಧಕದ ವಿಷಯ ಮುನ್ನೆಲೆಗೆ ಬಂದಿದೆ. ಎಲ್ಲ ಧರ್ಮದವರೂ ಈ ಧ್ವನಿವರ್ಧಕದ ಬಳಕೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದರು.

Edited By :
Kshetra Samachara

Kshetra Samachara

04/04/2022 05:32 pm

Cinque Terre

24.03 K

Cinque Terre

19

ಸಂಬಂಧಿತ ಸುದ್ದಿ