ಹುಬ್ಬಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ದುಂದುವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ, ನಗರದ ವಿವಿಧೆಡೆ 'ಪೇ ಮೇಯರ್' ಪೋಸ್ಟರ್‌ಗಳನ್ನು ಅಂಟಿಸಿದ್ದ ಕಾಂಗ್ರೆಸ್ ಮುಖಂಡರಿಗೆ ಮೇಯರ್ ಈರೇಶ ಅಂಚಟಗೇರಿ ಅವರು ಮಾನಹಾನಿ ನೋಟೀಸ್ ಕಳಿಸಿದ್ದಾರೆ.
ಹುಬ್ಬಳ್ಳಿಯ ರಜತ ಉಳ್ಳಾಗಡ್ಡಿಮಠ, ಧಾರವಾಡದ ದೀಪಕ ಚಿಂಚೋರೆ ಹಾಗೂ ಮಂಜುನಾಥ ನಡಟ್ಟಿ ಅವರಿಗೆ ವಕೀಲರ ಮೂಲಕ ನೋಟೀಸ್ ಕಳಿಸಿರುವ ಮೇಯರ್, ಮಾನಹಾನಿಗೆ ಪರಿಹಾರವಾಗಿ ಮೂವರೂ ತಲಾ 1 ಕೋಟಿ ರೂ.ವನ್ನು ಮಹಾನಗರ ಪಾಲಿಕೆಗೆ ಸಂದಾಯ ಮಾಡಬೇಕು. ಏಳು ದಿನಗಳೊಳಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
Kshetra Samachara
04/10/2022 11:53 am