ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿಎಂ ಬಂದ್ರೆ ಸಾರ್ವಜನಿಕರಿಗೆ ಯಾಕೆ ತೊಂದ್ರೆ ಕೊಡ್ತೀರಾ; ಕಾನ್‌ಸ್ಟೇಬಲ್ ಜತೆ ಮಹಿಳೆ ವಾಗ್ವಾದ

ಧಾರವಾಡ: ಸಿಎಂ ಆಗಮನದ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್ ಮಾಡಿದ್ದರಿಂದ ಮಹಿಳೆಯೊಬ್ಬರು ಪೊಲೀಸ್ ಪೇದೆಯೊಂದಿಗೆ ವಾಗ್ವಾದ ನಡೆಸಿದ ಪ್ರಸಂಗ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಉಳವಿ ಚೆನ್ನಬಸವೇಶ್ವರ ಮೂರ್ತಿಯ ಲೋಕಾರ್ಪಣೆಗೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ನರೇಂದ್ರ ಟೋಲ್ ಬಳಿ ಪೊಲೀಸರು ಝೀರೋ ಟ್ರಾಫಿಕ್ ಮಾಡಿದ್ದರು. ಇದರಿಂದ ಕಂಗಾಲಾದ ಮಹಿಳೆ ಸಿಎಂ ಬಂದ್ರೆ ನೀವು ಸಾರ್ವಜನಿಕರಿಗೆ ಏಕೆ ತೊಂದರೆ ಕೊಡ್ತೀರಿ? ಅಂತ ಪೊಲೀಸ್ ಕಾನ್‌ಸ್ಟೇಬಲ್ ಜೊತೆಗೆ ವಾಗ್ವಾದ ನಡೆಸಿದರು. ಸಿಎಂ ಆಗಮನದ ಹಿನ್ನೆಲೆಯಲ್ಲಿ ನರೇಂದ್ರ ಟೋಲ್ ಬಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದರು. ಇದು ಮಹಿಳೆ ವಾಗ್ವಾದಕ್ಕೆ ಕಾರಣವಾಯಿತು.

Edited By : Manjunath H D
Kshetra Samachara

Kshetra Samachara

15/05/2022 08:02 pm

Cinque Terre

65.38 K

Cinque Terre

36

ಸಂಬಂಧಿತ ಸುದ್ದಿ