ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಕೀಲರ ಸಂಘದ ಗದ್ದುಗೆ ಏರಿದ ಪೊಲೀಸ್ ಪಾಟೀಲ

ಧಾರವಾಡ: ಅತ್ಯಂತ ಹಳೇಯ ವಕೀಲರ ಸಂಘಗಳಲ್ಲೊಂದಾಗಿರುವ ಧಾರವಾಡದ ವಕೀಲರ ಸಂಘಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಸಿ.ಎಸ್.ಪೊಲೀಸ್ ಪಾಟೀಲ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸಿ.ಎಸ್.ಪೊಲೀಸ್ ಪಾಟೀಲ ಸೇರಿದಂತೆ ಮೂವರು ಸ್ಪರ್ಧೆ ನಡೆಸಿದ್ದರು. ಅತ್ಯಂತ ತುರಿಸಿನಿಂದ ಕೂಡಿದ್ದ ಈ ಚುನಾವಣೆಯಲ್ಲಿ ಕೊನೆಗೆ ಪೊಲೀಸ್ ಪಾಟೀಲ ಅವರು 526 ಅಧಿಕ ಮತಗಳನ್ನು ಪಡೆದು ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು.

ನಿನ್ನೆ ಚುನಾವಣೆ ನಡೆದು, ತಡರಾತ್ರಿವರೆಗೂ ಮತ ಎಣಿಕೆ ನಡೆಯಿತು. ಕೊನೆಗೆ ಸಿ.ಎಸ್.ಪೊಲೀಸ್ ಪಾಟೀಲ ಅವರು ಅಧಿಕ ಮತಗಳನ್ನು ಪಡೆದು ಚುನಾಯಿತರಾಗುತ್ತಿದ್ದಂತೆ ಅವರ ಬೆಂಬಲಿಗ ವಕೀಲರು ಪರಸ್ಪರ ಬಣ್ಣ ಎರಚಿಕೊಂಡು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Edited By : Manjunath H D
Kshetra Samachara

Kshetra Samachara

25/12/2021 12:27 pm

Cinque Terre

35.67 K

Cinque Terre

1

ಸಂಬಂಧಿತ ಸುದ್ದಿ