ಕುಂದಗೋಳ: ರಾಜ್ಯದ 30 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಜೈ ಕರ್ನಾಟಕ ಸಂಘಟನೆ ಆರಂಭ ಕಂಡಿದ್ದು, ಇದೇ ಅ.20 ರಂದು ಶನಿವಾರ ಕುಂದಗೋಳ ಪಟ್ಟಣದಲ್ಲಿ ಜೈ ಕರ್ನಾಟಕ ಸಂಘಟನೆಯ ಧಾರವಾಡ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆ ಜಿಲ್ಲಾಧ್ಯಕ್ಷ ಸುಧೀರ್ ಎಮ್ ಮುಧೋಳ ಹೇಳಿದರು.
ಅವರು ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೊಷ್ಠಿ ಕರೆದು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಕಾರ್ಯ ಹಾಗೂ ಜನರ ಜ್ವಲಂತ ಸಮಸ್ಯೆಗಳ ಧ್ವನಿಯಾಗಿ ನಮ್ಮ ಸಂಘ ಕರ್ತವ್ಯ ಮಾಡಿದ್ದು ಆ ಕರ್ತವ್ಯಕ್ಕಾಗಿ ಕುಂದಗೋಳ ತಾಲೂಕಿನ ಜನರ ಸೇವೆಗೆ ಬಂದಿದ್ದೇವೆ ಎಂದರು.
ಇದೇ ಅ.20 ರಂದು ಜೈ ಕರ್ನಾಟಕ ಸಂಘಟನೆಯ ಕಾರ್ಯಕ್ರಮ ಅಭಿನವ ಕಲ್ಯಾಣಪುರ ಬಸವಣ್ಣನವರು ಮಠದಲ್ಲಿ ನಡೆಯಲಿದ್ದು ಅಭಿನವ ಕಲ್ಯಾಣಪುರ ಬಸವಣ್ಣನವರಿಂದ ಉದ್ಘಾಟನೆ ಹಾಗೂ ಶ್ರೀ ಪಂಚಗ್ರಹ ಹಿರೇಮಠದ ಶಿಥಿಕಂಠೇಶ್ವರ ಸ್ವಾಮಿಗಳಿಂದ ಆರ್ಶಿವಚನ, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಆಗಮಿಸಲಿದ್ದು, ಸಂಘಟನೆ ಪದಗ್ರಹಣದ ದಿನ ಪ್ರವಾಸಿ ಮಂದಿರದಿಂದ ಅಭಿನವ ಕಲ್ಯಾಣಪುರ ಬಸವಣ್ಣನವರ ಮಠದವರೆಗೆ ಬೈಕ್ ರ್‍ಯಾಲಿ ನಡೆಯಲಿದೆ ಎಂದರು.
ಇನ್ನೂಳಿದಂತೆ ಹಲವಾರು ಜನ ಜೈ ಕರ್ನಾಟಕ ಸಂಘಟನೆ ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಕುಂದಗೋಳ ಪಟ್ಟಣದ ರಾಜಕೀಯ ಮುಖಂಡರು ಸಾರ್ವಜನಿಕರು ಸಭೆಗೆ ಹಾಜರಾಗಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಹೊಸಮನಿ, ತಾಲೂಕು ಅಧ್ಯಕ್ಷ ಸಿದ್ಧಲಿಂಗೇಶ್ ಕರೆಣ್ಣನವರ, ಲಕ್ಷ್ಮಣ ದೊಡ್ಡಮನಿ, ಮಂಜುನಾಥ ಅಮ್ಮಿನಭಾವಿ ಉಪಸ್ಥಿತರಿದ್ದರು.
Kshetra Samachara
19/08/2022 12:14 pm