ಹುಬ್ಬಳ್ಳಿ: ಕರ್ನಾಟಕದಲ್ಲಿ ಅತಿ ಹೆಚ್ಚು ವಾಣಿಜ್ಯೋದ್ಯಮಗಳು ಬೆಳೆಯಬೇಕು. ಜಗತ್ತು ಇಂದು ನಮ್ಮ ಕಡೆ ನೋಡುತ್ತಿದೆ. ಟೆಕ್ನಾಲಜಿಯಲ್ಲಿ ನಮ್ಮ ರಾಜ್ಯ ಬೆಳೆಯುತ್ತಿದೆ. ದುಡ್ಡೆ ದೊಡ್ಡಪ್ಪ ಅನ್ನೊ ಕಾಲ ಬದಲಾಗಿದೆ. ದುಡಿಮೆ ದೊಡ್ಡಪ್ಪ ಅನ್ನೊ ಕಾಲ ಬಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದ ಖಾಸಗಿ ಹೊಟೇಲ್‌ದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಸಮ್ಮೇಳನದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಮ್ಮೇಳನ ಮಾಡುತ್ತಾ ಇರೋದು ಖುಷಿಯ ವಿಷಯ. 21 ನೇ ಶತಮಾನದಲ್ಲಿ ಬದಲಾವಣೆ ಬೇಕಾಗಿದೆ. ಆರ್ಥಿಕತೆ ಎಂಜಿನ್ ಎಂಬುದು ದೇಶದ ಬೆನ್ನೆಲುಬು. ಇತ್ತೀಚೆಗೆ ಪರಿಭಾಷೆ ಬದಲಾವಣೆ ಆಗಿದೆ. ಸರ್ಕಾರದ ಚಿಂತನೆ ಬದಲಾವಣೆ ಆಗಿದೆ. ಮಾರ್ಕೆಟ್ ಟೆಕ್ನಾಲಜಿ ಒಪ್ಪಿಕೊಂಡ ಹಲವಾರು ರೀತಿಯ ಬದಲಾವಣೆ ಆಗಿವೆ ಎಂದರು.
ಖಾಸಗೀಕರಣ ಉದಾರೀಕರಣ ಜಾಗತೀಕರಣದ ನಡುವೆ ಅಂತಃಕರಣ ಮರೆಯುತ್ತಿದ್ದೇವೆ. ಅವುಗಳನ್ನು ಪುನರ್ ಸ್ಥಾಪನೆ ಮಾಡುವುದು ಅವಶ್ಯ ಇದೆ. ನಾವು ಕೇವಲ ಲಾಭ ನಷ್ಟದ ಬಗ್ಗೆ ವಿಚಾರ ಮಾಡದೇ ಬಡಜನರ ಬಗ್ಗೆ ಕೂಡಾ ಯೋಚನೆ ಮಾಡುವ ಕಾಲ ಬಂದಿದೆ. ಬಹಳಷ್ಟು ಕಂಪನಿಗಳು ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ಕಾರ್ಯ ಮಾಡುತ್ತವೆ. ಅದು ಕಂಪನಿಯ ಮುಖ್ಯಸ್ಥರ ಮನಃಶಾಂತಿಗಾಗಿ ಇದೀಗ ಜಾಗತಿಕ ಜಗತ್ತು ಬದಲಾವಣೆ ಆಗತ್ತಾ ಇದೆ ಎಂದರು.
ಟೂ ಟೈರ್ ಸಿಟಿಯಲ್ಲೂ ಅಭಿವೃದ್ಧಿ ಆಗತ್ತಾ ಇವೆ. ಕರ್ನಾಟಕ ರಾಜ್ಯ ಪ್ರಗತಿ ಪರ ರಾಜ್ಯ. ಇದಕ್ಕೆ ರಾಜಮಹಾರಾಜರ ಕೊಡುಗೆ ಸೇರಿದಂತೆ ಜನರ ಸಹಕಾರ ಅಗತ್ಯವಾಗಿದೆ. ಜಗತ್ತು ನಮ್ಮ ಕಡೆಗೆ ನೋಡತ್ತಾ ಇದೆ. ಸರ್ಕಾರ ಮತ್ತು ಕಂಪನಿಗಳು ಒಂದುಗೂಡಿ ಕೆಲಸ ಮಾಡಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/07/2022 02:18 pm