ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕುದುರೆ ಏರಿ ಬಂದ ಕರಿಗಾರ: ಹೀಗೊಂದು ವಿಭಿನ್ನ ಪ್ರತಿಭಟನೆ

ನವಲಗುಂದ: ನವಲಗುಂದ ವಿಧಾನ ಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿಯಿಂದ ಹೆಬಸೂರ ಗ್ರಾಮದ ರಸ್ತೆ ಅವ್ಯವಸ್ಥೆಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರೊಂದಿಗೆ ರಸ್ತೆಗಿಳಿದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಕುದುರೆ ಏರಿ ವಿನೂತನವಾಗಿ ಪ್ರತಿಭಟನೆ ಮಾಡಿದರು.

ಬ್ಯಾಹಟ್ಟಿಯಿಂದ ಹೆಬಸೂರು ಗ್ರಾಮಕ್ಕೆ ತರಳುವ ರಸ್ತೆಯ ದುಸ್ಥಿತಿ ಬಗ್ಗೆ ಈಗಾಗಲೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಹ ಸುದ್ದಿಯನ್ನು ಬಿತ್ತರಿಸಿದೆ. ಆದರೂ ಇದುವರೆಗೂ ಯಾವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ ಎಂಬ ಆರೋಪಕ್ಕೆ ಈ ರಸ್ತೆಯೇ ಸಾಕ್ಷಿಯಾಗಿದೆ.

ಸುಮಾರು 200 ಕ್ಕೂ ಹೆಚ್ಚು ಬೈಕ್ ಹಾಗೂ ನೂರಾರು ಸ್ಥಳೀಯರು ಇದೆ ರಸ್ತೆಯಿಂದ ಬಾಗಲಕೋಟಿ ವಿಜಯಪುರ ರಾಷ್ಟ್ರೀಯ ಹೆದ್ದಾರಿವರೆಗೂ ಆಗಮಿಸಿ, ರಸ್ತೆ ತಡೆದು, ಹೆಬಸೂರ ಗ್ರಾಮದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ಇನ್ನಾದರೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಎಚ್ಚೆತ್ತು ರಸ್ತೆಯ ಸುಸರ್ಜಿತ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Edited By :
Kshetra Samachara

Kshetra Samachara

25/05/2022 10:37 pm

Cinque Terre

66.16 K

Cinque Terre

9

ಸಂಬಂಧಿತ ಸುದ್ದಿ