ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನಿಯಮ ಬಾಹಿರ ಸುಂಕ ವಸೂಲಾತಿ ಕೂಡಲೇ ನಿಲ್ಲಿಸುವಂತೆ ಪಿ.ಎಚ್ ನೀರಲಕೇರಿ ಒತ್ತಾಯ

ಅಣ್ಣಿಗೇರಿ: ಹುಬ್ಬಳ್ಳಿ-ಹೊಸಪೇಟೆ ನಡುವಿನ 139 ಕಿ.ಮೀ. ಉದ್ದದ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಎನ್.ಎಚ್.ಡಿ.ಪಿ) ಅಡಿ ಸುಮಾರು 3900 ಕೋ.ರೂ.ಗಳ ವೆಚ್ಚದಲ್ಲಿ ಸದ್ಯ ಚತುಷ್ಪಥವಾಗಿದೆ. ನಿರ್ಮಿಸಿ-ನಿರ್ವಹಿಸಿ-ಹಸ್ತಾಂತರಿಸಿ (ಬಿ.ಓ.ಟಿ) ಷರತ್ತಿನ ಅನ್ವಯ ಸರಕಾರ ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡಿದೆ. ಈಗ ಕೇವಲ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್ ನೀರಲಕೇರಿ ತಾಲೂಕಿನ ನಲವಡಿ ಸುಂಕ ವಸೂಲಾತಿ ಕೇಂದ್ರದಲ್ಲಿ ಹೇಳಿದರು.

ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಎರಡೂ ಬದಿಗೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿ ಕೊಡಬೇಕಿತ್ತು. ಈ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಸೂಕ್ತ ಅನುಕೂಲತೆಗಳಿಲ್ಲ. ಅಲ್ಲದೇ ರಸ್ತೆ ಬದಿ ವಾಹನಗಳ ನಿಲುಗಡೆ, ಅಕ್ಕಪಕ್ಕದ ಗ್ರಾಮಗಳ ಜನರ ಸಂಚಾರಕ್ಕೆ ರಸ್ತೆ ಕೆಳಗಿನ ಮಾರ್ಗಗಳು ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಿಲ್ಲ.ಕಾಮಗಾರಿ ನಿರ್ವಹಿಸುವ ಮೊದಲು ಸೂಚಿಸಲಾಗಿದ್ದ ನಿಯಮಗಳನ್ನು ಪಾಲಿಸಲಾಗಿಲ್ಲ. ಆದರೆ, ಸಾರ್ವಜನಿಕರಿಂದ ರಸ್ತೆ ಸುಂಕವನ್ನು (ಟೋಲ್ ಫೀ) ಮಾತ್ರ ವಸೂಲು ಮಾಡಲಾಗುತ್ತಿದೆ. ಇದು ಸಾರ್ವಜನಿಕರನ್ನು ಸುಲಿಯುವ ತಂತ್ರವಾಗಿದೆ ಎಂದು ಮಾತನಾಡಿದರು.

Edited By : Manjunath H D
Kshetra Samachara

Kshetra Samachara

14/05/2022 04:53 pm

Cinque Terre

39.27 K

Cinque Terre

7

ಸಂಬಂಧಿತ ಸುದ್ದಿ