ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರೈತರ ಜೀವ ಇರುವುದು ಹೊಲಗಳಲ್ಲಿ; ಸಚಿವ ಮುನೇನಕೊಪ್ಪ

ಅಣ್ಣಿಗೇರಿ: ತಾಲೂಕಿನ ರೈತರ ರಸ್ತೆಗಳು ಯಾವುದೇ ಕಾರಣಕ್ಕೂ ಅರ್ಧ ಕೆಲಸ ಆಗಬಾರದು. ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ನಿಮಗೆ ಎಷ್ಟು ದುಡ್ಡು ಬೇಕಾದರೂ ಮಂಜೂರು ಮಾಡಿ ಕೊಡಿಸುತ್ತೇನೆ ಎಂದು ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಚಕ್ಕಡಿ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ 9 ಚಕಡಿ ರಸ್ತೆಗಳ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿಗಳನ್ನು ಸರಕಾರ ಈಗಾಗಲೇ ಬಿಡುಗಡೆಗೊಳಿಸಿದೆ. ಹಣ ಕಡಿಮೆ ಆದರೆ ಇನ್ನೂ ಹೆಚ್ಚಿನ ಅನುದಾನವನ್ನು ತರಲು ಸಿದ್ಧನಿದ್ದೇನೆ. ರೈತರ ಜೀವ ಇರುವುದು ಹೊಲಗಳಲ್ಲಿ. ರೈತ ಬೆಳೆದ ಬೆಳೆಗಳನ್ನು ಸರಾಗವಾಗಿ ಮನೆಗೆ ತೆಗೆದುಕೊಂಡು ಬರಬೇಕು ಎಂಬ ಉದ್ದೇಶವಿರುತ್ತದೆ ಎಂದು ಸಚಿವರು ಹೇಳಿದರು.

Edited By : Shivu K
Kshetra Samachara

Kshetra Samachara

12/04/2022 11:39 am

Cinque Terre

30.44 K

Cinque Terre

0

ಸಂಬಂಧಿತ ಸುದ್ದಿ