ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನಲವಡಿ ಟೋಲ್ ಪ್ಲಾಜಾದಲ್ಲಿ ಅಕ್ಕ-ಪಕ್ಕದ ಹಳ್ಳಿಯ ವಾಹನ ಮಾಲೀಕರಿಗೆ ಫ್ರೀ ಬಿಡುವಂತೆ ಗ್ರಾಮಸ್ಥರು ಒತ್ತಾಯ ಮಾಡುತ್ತಿದ್ದಾರೆ.
ಹೌದು ನಲವಡಿ ಹಾಗೂ ಭದ್ರಾಪುರ ಗ್ರಾಮದ ವಾಹನ ಮಾಲೀಕರು ಇಂದು ಮುಂಜಾನೆ ಟೋಲ್ ಪ್ಲಾಸ ಕಚೇರಿಗೆ ಭೇಟಿ ನೀಡಿ, ಫ್ರೀ ಬಿಡುವಂತೆ ಒತ್ತಾಯಿಸಿದರು. ಟೋಲ್ ಪ್ಲಾಜಾದಿಂದ ಭದ್ರಾಪುರ ಗ್ರಾಮಕ್ಕೆ ಮೂರರಿಂದ ಮೂರೂವರೆ ಕಿಲೋಮೀಟರ್ ಇದೆ. ಹಾಗೂ ನಲವಡಿ ಗ್ರಾಮದಿಂದ ಒಂದರಿಂದ ಒಂದೂವರೆ ಕಿಲೋಮೀಟರ್ ಟೋಲ್ ಪ್ಲಾಜಾ ಸಿಗುತ್ತದೆ.
ಪ್ರತಿದಿನ ಬೆಳಿಗ್ಗೆ ಆದರೆ ಸಾಕು ಈ ಟೋಲ್ ಮುಖಾಂತರವೇ 2 ರಿಂದ 3 ಸಲ ಪ್ರಯಾಣಿಸಬೇಕಾದ ಅನಿವಾರ್ಯವಾಗಿರುತ್ತದೆ. ಅಕ್ಕ-ಪಕ್ಕ ಗ್ರಾಮದ ಜಮೀನುಗಳಿಗೆ ಕೂಲಿ ಆಳುಗಳನ್ನು ಕರೆದುಕೊಂಡು ಬರಲು ಹೋಗ ಬೇಕಾಗುತ್ತದೆ.
ಇದರಿಂದ ವಾಹನ ಮಾಲೀಕರಿಗೆ ತೊಂದರೆಯಾಗುತ್ತಿದ್ದು, ದುಡಿದ ಹಣವನ್ನೆಲ್ಲಾ ಟೋಲ್ ಕಟ್ಟಿದರೆ ತಿನ್ನುವುದಾದರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಅಕ್ಕ-ಪಕ್ಕದ ಹಳ್ಳಿಯವರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
03/04/2022 06:02 pm