ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕೋಟ್ಯಾಂತರ ರೂ. ಅನುದಾನ ನೀಡಿ ಮಾದರಿ ಕ್ಷೇತ್ರ ಮಾಡಲು ಮುಂದಾಗಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಈಗಾಗಲೇ ಅಮೃತ ಮಹೋತ್ಸವ ಹಿನ್ನೆಲೆ ಒಂದು ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗೂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ಅನುದಾನವನ್ನು ಕೂಡ ಸರ್ಕಾರ ಬಿಡುಗಡೆಗೊಳಿಸಿದೆ. ಮತ್ತು ಜಲಜೀವನ್ ಮಿಷನ್ ಯೋಜನೆಯಲ್ಲಿ 54 ಕೋಟಿ ಅನುದಾನ ನೀಡಿದೆ. ಪಟ್ಟಣದ ಕ್ರೀಡಾಂಗಣಕ್ಕೆ 5 ಕೋಟಿ ಅನುದಾನವನ್ನು ಸಹ ನೀಡಿದೆ. ಇದಲ್ಲದೇ 4ನೇ ಹಂತದ ನಗರೋತ್ಥಾನ ಯೋಜನೆ ಅಡಿಯಲ್ಲಿ 10 ಕೋಟಿ ಹಣ ಬಿಡುಗಡೆ ಆಗಿದೆ. ಇನ್ನು ಬರುವ ದಿನಗಳಲ್ಲಿ ನೀರಾವರಿ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕಾಗಿ 20 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್, ಶಿವಾನಂದ್ ಹೊಸಳ್ಳಿ, ಶಿವಯೋಗಿ ಸುರಕೋಡ, ಬಸವರಾಜ್ ಯಳವತ್ತಿ, ಸಿ.ಜಿ.ನಾವಳ್ಳಿ, ಜಗದೀಶ್ ಚವಡಿ, ರಾಘವೇಂದ್ರ ರಾಮಗಿರಿ ಉಪಸ್ಥಿತರಿದ್ದರು.
Kshetra Samachara
18/01/2022 12:17 pm