ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಿಲ್ಲಾ ಉಸ್ತುವಾರಿ ಸಚಿವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಅಣ್ಣಿಗೇರಿ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅಂದಾಜು 2 ಕೋಟಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬಸಾಪೂರ ಗ್ರಾಮದಲ್ಲಿ ಜಲಜೀವನ ಯೋಜನೆಯಡಿ ಅಂದಾಜು 1 ಕೋಟಿ 63 ಲಕ್ಷ ಮೊತ್ತದ 24*7 ಶುದ್ಧವಾದ ನೀರನ್ನು ನೀಡುವ ಕಾಮಗಾರಿಗೆ ಗುದ್ದಲಿ ಪೂಜೆ ನೇರವೆರಿಸಿದರು. ಗ್ರಾಮದಲ್ಲಿ ನಿರ್ಮಾಣಗೊಂಡ ಗ್ರಂಥಾಲಯ ಹಾಗೂ ಗರಡಿ ಮನೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಸೈದಾಪೂರ ಗ್ರಾಮದಲ್ಲಿ ಅಂದಾಜು 85 ಲಕ್ಷ ಮೊತ್ತದ ಜಲಜೀವನ ಮಷಿನ್ ಗೆ ಚಾಲನೆ ನೀಡಲಾಯಿತು. ಮಜ್ಜಿಗುಡ್ಡ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸಲು ಸುಮಾರು 60 ಲಕ್ಷ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಪ್ರತಿಯೊಂದು ಗ್ರಾಮಗ ಮನೆ ಮನೆಗೂ ಗಂಗೆ ಎಂದು ಹೇಳಿದರು.

ಪ್ರತಿಯೊಬ್ಬರೂ ಶುದ್ದ ನೀರನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಶಿವಯೋಗಿ ಸುರಕೋಡ, ತಹಶೀಲ್ದಾರ ಮಂಜುನಾಥ ಅಮಾಸಿ, ಮಹೇಶ ದೇಸಾಯಿ, ಶಂಕರ ಸಿರಗುಪ್ಪಿ, ಯಲ್ಲಪ್ಪ ಅಕ್ಕಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

02/11/2021 09:26 pm

Cinque Terre

14.95 K

Cinque Terre

2

ಸಂಬಂಧಿತ ಸುದ್ದಿ