ಹುಬ್ಬಳ್ಳಿ: ಹುಬ್ಬಳ್ಳಿ ನೃಪತುಂಗ ಬೆಟ್ಟವನ್ನು ಅಭಿವೃದ್ಧಿ ಪಡಿಸಲಾಗಿದ್ದು, ಶೀಘ್ರದಲ್ಲೇ ಚಿಕ್ಕ ಮಕ್ಕಳಿಗಾಗಿ ವಿಶೇಷ ಉದ್ಯಾನವನ್ನು ನಿರ್ಮಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರಾದ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ನೃಪತುಂಗ ಬೆಟ್ಟದಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳ ಹಿಂದೆ ನೃಪತುಂಗ ಬೆಟ್ಟದಲ್ಲಿ ಅರಣ್ಣೀಕರಣಕ್ಕೆ ಚಾಲನೆ ನೀಡಿದಾಗ ಹಲವು ಮಂದಿ ಅಚ್ಚರಿ ಪಟ್ಟಿದ್ದರು. ಬರಡಾಗಿದ್ದ ಬೆಟ್ಟದಲ್ಲಿ ಮರಗಳನ್ನು ಬೆಳೆಸುವ ಪ್ರಯತ್ನ ಇಂದು ಪಲಫ್ರದವಾಗಿದೆ. ಹುಬ್ಬಳ್ಳಿಗೆ ಆಗಮಿಸುವ ಹಲವು ಜನರು ನೃಪತುಂಗ ಬೆಟ್ಟಕ್ಕೆ ತಪ್ಪದೇ ಭೇಟಿ ನೀಡುತ್ತಾರೆ. ನೃಪತುಂಗ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗಿದೆ. ನೃಪತುಂಗ ಬೆಟ್ಟದ ನಿರ್ವಹಣೆಗಾಗಿ ವಾಯುವಿಹಾರಿಗಳ ಸಂಘವನ್ನು ಸ್ಥಾಪಿಸಲಾಗಿದೆ. ಪ್ರವಾಸಿಗರಿಂದ ಶುಲ್ಕವನ್ನು ಪಡೆಯಲಾಗುತ್ತಿದೆ. ಸದ್ಯ 4 ಕೋಟಿ ಶುಲ್ಕದಿಂದ ಸಂಗ್ರಹವಾಗಿದೆ. ಇದರಲ್ಲಿ 60 ಲಕ್ಷ ಅನುದಾನ ಬಳಸಿಕೊಂಡು ಮಕ್ಕಳಿಗಾಗಿ ವಿಶೇಷ ಉದ್ಯಾನವನ ನಿರ್ಮಿಸಲಾಗುವುದು. ಬೆಟ್ಟಕ್ಕೆ ಆಗಮಿಸುವ ವಯೋವೃದ್ಧರು ಹಾಗೂ ವಿಕಲಚೇತನರಿಗಾಗಿ ಎಲೆಕ್ಟ್ರಿಕಲ್ ಬಗ್ಗೀ ವಾಹನ ಸೇವೆಯನ್ನು ಸಹ ಆರಂಭಿಸಲಾಗಿದೆ ಎಂದರು.
ನೂತನ ಚಾರಣ ಪಥ ಉದ್ಘಾಟನೆ
ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ನೃಪತುಂಗ ಬೆಟ್ಟದ ಮೇಲೆರಲು ಬಯಸುವವರಿಗೆ ನೂತನ ಚಾರಣ ಪಥ ಉದ್ಘಾಟಿಸಲಾಗಿದೆ. ಪರ್ತಕರ್ತ ನಗರ ಮಾರ್ಗವಾಗಿ ನೃಪತುಂಗ ಬೆಟ್ಟ ತಲುಪುವ 1.4 ಕಿ.ಮೀ ಚಾರಣ ಪಥಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಇಂದು ಚಾಲನೆ ನೀಡಿದರು. ವಾರಾಂತ್ಯದ ದಿನಗಳು ಹಾಗೂ ವಿಶೇಷ ರಜಾದಿನಗಳಲ್ಲಿ ಚಾರಣ ಪಥ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.
ಚಿರತೆ ಸರೆ ಕಾರ್ಯಾಚರಣೆಯಲ್ಲಿ ಭಾಗವಹಸಿದವರಿಗೆ ಸನ್ಮಾನ
ನೃಪತುಂಗ ಬೆಟ್ಟದ ತಪ್ಪಲಿನಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಅರಣ್ಯ ಇಲಾಖೆ ಧಾರವಾಡ ಕವಲಗೇರಿಯಲ್ಲಿ ಸುರಕ್ಷಿತವಾಗಿ ಚಿರತೆಯನ್ನು ಸರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಸಫಲವಾಗಿತ್ತು. ಈ ಕಾರ್ಯಾಚರಣೆ ಶ್ರಮಿಸಿದ ಅರಣ್ಯ ಇಲಾಖೆ ಹಾಗೂ ಇತರೆ ಸಂಘ ಸಂಸ್ಥೆಗಳ ಪದಕಾರಿಗಳಿಗೆ ಸನ್ಮಾಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ
ಯಶಪಾಲ್ ಕ್ಷೀರಸಾಗರ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ್, ವಾಯು ವಿಹಾರ ಸಂಘದ ಡಾ.ಗೋವಿಂದ ಮಣ್ಣೂರು, ಸಿದ್ದು ಮೊಗಲಿಶೆಟ್ಟರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
07/10/2021 06:15 pm