ಕಲಘಟಗಿ: ಅಳ್ನಾವರ ಭಾಗದಲ್ಲಿ ೨೫೦೦ ಎಕರೆ ಭೂಮಿ ಸ್ವಾಧಿನ ಮಾಡಲಾಗುತ್ತಿದೆ.ಇದಕ್ಕಾಗಿ ಕೆಲವು ರೈತರು ಒಪ್ಪಿದ್ದಾರೆ,ಕೆಲವು ರೈತರು ಭೂಮಿ ಕೊಡಲು ಒಪ್ಪುತ್ತಿಲ್ಲ.ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧಿನಕ್ಕೆ ಮುಂದಾಗಿರುವ ರಾಜ್ಯ ಸರಕಾರ ಮೊದಲು ರೈತರ ಕುಟುಂಬಗಳಿಗೆ ಉದ್ಯೋಗ ಭಧ್ರತೆ ನೀಡಲಿ ಎಂದು ಮಾಜಿ ಸಚಿವ ಸಂತೋಷ ಲಾಡ್ ಆಗ್ರಹಿಸಿದರು.
ಅವರು ಕಲಘಟಗಿ ತಾಲೂಕಿನ ಮಡ್ಕಿಹೊನ್ನಳ್ಳಿಯ ಅಮೃತ ನಿವಾಸದಲ್ಲಿ ಭಾನುವಾರ ಸಂಜೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ತಮ್ಮ ಉದ್ದೇಶ ಕಾರೀಡಾರ ನಿರ್ಮಾಣವಾಗಬಾರದು ಎಂಬುದು ಅಲ್ಲ,ಇದಕ್ಕೆ ತಮ್ಮ ಸಹಕಾರ ಇದೆ.ಆದರೆ ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು ಮೂರು ಸಾವಿರ ಎಕರೆ ಭೂಮಿ ಆಗಲೇ ಲಭ್ಯವಿದೆ.ಭೂಸ್ವಾಧಿನ ಮಾಡಿಕೊಂಡಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ಭದ್ರತೆ ಒದಗಿಸಲು ಸರಕಾರ ಕಾನೂನು ಪ್ರಕಾರ ಪರಿಹಾರ ನೀಡಲಿ.ಬರೀ ಲ್ಯಾಂಡ್ ಬ್ಯಾಂಕಗಾಗಿ ರೈತರ ಭೂಮಿ ಖರೀದಿ ಮಾಡುವುದು ಬೇಡ,ಈ ಕುರಿತು ಸಚಿವರಿಗೂ ಮನವಿ ನೀಡಿ ಒತ್ತಾಯಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಮುರಳ್ಳಿ,ಅಳ್ನವಾರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶಗೌಡ ಕರಿಗೌಡರ,ಎಸ್ ಆರ್ ಪಾಟೀಲ,ಇಸ್ಮಾಯಿಲ್ ತಮಟಗಾರ,ಹರಿಶಂಕರ ಮಠದ,ವಿ ಪಿ ಪಟ್ಟಣಶೆಟ್ಟಿ,ಸೊಮಣ್ಣ ಬೆನ್ನೂರ,ಕಲ್ಲಯ್ಯ ಹಿರೇಮಠ,ಆನಂದ ಕಲಾಲ,ಶ್ರಿಕಾಂತ ಗಾಯಕವಾಡ,ಭೋಜಪ್ಪ ಲಮಾಣಿ,ಅಜಮತ್ ಜಹಗೀರದಾರ ಉಪಸ್ಥಿತರಿದ್ದರು.
Kshetra Samachara
13/09/2021 09:45 am