ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏಪ್ಪ... ಇವತ್ತಂತೂ ಏನ ಟ್ರಾಫಿಕ್ ರೀ... ಸಾಕಾಗಿ ಹೋಯಿತು ನೋಡ್ರಿ ಶೆಟ್ಟರ್,ಜೋಶಿ ಸಾಹೇಬರೇ..!

ಹುಬ್ಬಳ್ಳಿ: ನಮಸ್ಕಾರ ಹುಬ್ಬಳ್ಳಿ-ಧಾರವಾಡ ಮಂದಿಗೆ ಹ್ಯಾಂಗ್ ಇದ್ದೀರಿ.. ಅರೇ ನೀವು ಏನ ಬಿಡ್ರಿ ಅರಾಮ ಇದ್ದೀರಿ‌.. ಜೋಶಿ ಸಾಹೇಬರು, ಶೆಟ್ಟರ್ ಸಾಹೇಬರ ನೇತೃತ್ವದ ಸಾಕಷ್ಟು ಯೋಜನೆ ಲಾಭ ತೆಗೆದುಕೊಂಡು ಮಸ್ತ ಇದ್ದೀರಿ ಆದರೂ ನಿಮ್ಮ ಕಷ್ಟ ಮಾತ್ರ ಈ ಜನ್ಮದಾಗ ಬಗೆಹರಿಯುವಂಗ ಕಾಣವಲ್ತು ನೋಡ್ರಿ..

ಅರೇ ಯಾಕೆ ಹಿಂಗ ಅಂತಿದ್ದೀರಾ ಅಂದುಕೊಂಡ್ರಾ.. ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂದು ಕರೆಸಿಕೊಳ್ಳೋ ಅವಳಿನಗರದ ಜನರಿಗೆ ಹೊರಗ ಬಂದರೇ ಸಾಕು ಅವಳಿ ಅನುಭವವಾಗುವುದಂತೂ ಸತ್ಯ. ಒಂದು ಕಡೆಗೆ ಪಾಲಿಕೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮುಗಿ ಬಿದ್ದ ಜನರ ಸಂಭ್ರಮ. ಮತ್ತೊಂದು ಕಡೆಗೆ ರಸ್ತೆಯಲ್ಲಿ ಟ್ರಾಫಿಕ್ ಕಿರಿ ಕಿರಿಯಿಂದ ಹಿಡಿಶಾಪ ಹಾಕುತ್ತಿರುವ ಜನರು. ನೋಡ್ರಿ ಹ್ಯಾಂಗ ಜೀವನ ನಡೆಸಬೇಕು ಹುಬ್ಬಳ್ಳಿ ಧಾರವಾಡ ಮಹಾನಗರದಾಗ.

ನಾಮಪತ್ರ ಸಲ್ಲಿಸುವ ಕೆಲವು ಗಂಟೆ ಕಾಲದ ಕೆಲಸಕ್ಕೆ ಈ ಪರಿ ಟ್ರಾಫಿಕ್ ಕಿರಿ ಕಿರಿ ಆದರೆ ಇನ್ನೂ ಮುಂದ ಫ್ಲೈ ಓವರ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಅಂತೂ ಜನರ ಗತಿ ದೇವರೇ ಬಲ್ಲ. ಹ್ಯಾಂಗ ಐತಿ‌ ನೋಡ್ರಿ ಸಾಹೇಬರ ವಾಣಿಜ್ಯನಗರಿ ಹುಬ್ಬಳ್ಳಿಯ ಸಮಸ್ಯೆ. ಮಾರ್ಕೆಟ್ ಒಳಗೆ ಹೋದರೆ ರಸ್ತೆ ಸರಿಯಿಲ್ಲ. ರಸ್ತೆ ಚನ್ನಾಗಿರುವಲ್ಲಿ ಬಂದರೆ ಜಲ್ದಿ ಮನೆಗೆ ಹೋಗೋಕೆ ಆಗಲ್ಲ ಹಿಂಗಾದರೇ ಮುಂದೇ ಏನ ಮಾಡೋದು...?

Edited By : Nagesh Gaonkar
Kshetra Samachara

Kshetra Samachara

23/08/2021 03:54 pm

Cinque Terre

74.41 K

Cinque Terre

13

ಸಂಬಂಧಿತ ಸುದ್ದಿ