ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕ್ಷೇತ್ರದಲ್ಲಿನ ಧಾರವಾಡ ರಾಮನಗರ ಹೆದ್ದಾರಿ ಟೋಲ್ ವಸೂಲಿ ನಿಲ್ಲಿಸಿ: ಶಾಸಕ ಸಿ ಎಂ ನಿಂಬಣ್ಣವರ

ಕಲಘಟಗಿ: ಕ್ಷೇತ್ರದಲ್ಲಿ ಬರುವ ಧಾರವಾಡ ರಾಮನಗರ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಇರವುದರಿಂದ ಜನವಿರೋಧಿ ಟೋಲ್ ವಸೂಲಿ ನಿಲ್ಲಿಸುವಂತೆ ಶಾಸಕ ಸಿ ಎಂ ನಿಂಬಣ್ಣವರ ಸರಕಾರವನ್ನು ಒತ್ತಾಯಿಸಿದ್ದು,ಟೋಲ್ ನಾಕಾ ಬಂದ್ ಮಾಡಿ ಪ್ರತಿಭಟನೆಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಅವರು ನಾಗರೀಕ ಸೇವಾ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,ಧಾರವಾಡ ರಾಮನಗರ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ೨೦೧೦ ರಲ್ಲಿ ೨೩೭ ಕೋಟಿ ಅಂದಾಜಿನಲ್ಲಿ ಕೈಗೊಳ್ಳಲಾಗಿದ್ದು, ಅಪೂರ್ಣವಾಗಿದೆ.೨೦೧೩ ರಿಂದಲೇ ರಸ್ತೆ ಸುಧಾರಣೆಯೊಂದಿಗೆ ಟೋಲ್ ವಸೂಲಿಗೂ ಅವಕಾಶ ನೀಡಲಾಗಿತ್ತು.೧೦ ವರ್ಷವಾದರು ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿಲ್ಲ,ಆರ್ ಓ ಬಿ ಗಳನ್ನು ನಿರ್ಮಿಸದೇ,ಪೂರ್ಣ ಪ್ರಮಾಣದಲ್ಲಿ ಹಣ ಬಳಕೆ ಮಾಡಿದ್ದಾರೆ. ಕೇಂದ್ರ ರಾಜ್ಯ ಸರಕಾರಗಳು ಸಹ ರೂ. ೮೨ ಕೋಟಿ ರೂಪಾಯಿ ವಿಜಿಎಫ್ ವಂತಿಕೆ ನೀಡಿವೆ.ಕಾಮಗಾರಿ ಅಪೂರ್ಣವಾಗಿದ್ದು,ಗುತ್ತಿಗೆದಾರರು ಟೋಲ್ ವಸೂಲಿ ಮಾಡುತ್ತಿದ್ದಾರೆ.

ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲು ಗಮನಹರಿಸಿಲ್ಲ ಎಂದು ಶಾಸಕ ಸಿ ಎಂ ನಿಂಬಣ್ಣವರ ಆರೋಪಿಸಿದ್ದಾರೆ.ದಿ: ೨೩-೦೮-೨೦೨೧ ಸೋಮವಾರ ಬೆಳಿಗ್ಗೆ ೧೧ ಘಂಟೆಗೆ ಧಾರವಾಡ,ರಾಮನಗರ ಹೆದ್ದಾರಿ ಮೇಲಿನ ಮುಗದ ಗ್ರಾಮದ ಮುಂಚೆ ಬರುವ ಟೋಲ್ ನಾಕಾವನ್ನು ಸಾರ್ವಜನಿಕರೊಂದಿಗೆ ಬಂದ್ ಮಾಡಲಾಗುವುದು.ರಸ್ತೆ ಮತ್ತು ಸೇತುವೆಗಳ ಕಾಮಗಾರಿ ಕೈಗೊಳ್ಳದ ವಿನಃ ಟೋಲ್ ವಸೂಲಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಶಾಸಕ ಸಿ ಎಂ ನಿಂಬಣ್ಣವರ ಎಚ್ಚರಿಸಿದ್ದಾರೆ.

Edited By : Shivu K
Kshetra Samachara

Kshetra Samachara

09/08/2021 05:24 pm

Cinque Terre

25.05 K

Cinque Terre

70

ಸಂಬಂಧಿತ ಸುದ್ದಿ