ಅಳ್ನಾವರ: ಕಳೆದ ತಿಂಗಳು ಸುರಿದ ಧಾರಾಕಾರ ಮಳೆಯಿಂದ ನೆರೆಯ ಮಹಾಪೂರಕ್ಕೆ ಅಳ್ನಾವರ ತಾಲೂಕಿನ ಬ್ರಹತ್ತ ಕೆರೆ ಆಗಿರುವ ಹುಲಿಕೇರಿ ಇಂದಿರಮ್ಮ ಕೆರೆಗೆ ಕಟ್ಟಲಾಗಿದ್ದ ತಡೆಗೋಡೆಯು ಕೊಚ್ಚಿಕೊಂಡು ಹೋಗಿ ನೀರು ಸಂಗ್ರಹಗೊಳ್ಳದಂತಾಗಿದೆ.
400 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು, ಬೇಸಿಗೆ ಕಾಲದಲ್ಲಿ ಅಳ್ನಾವರ ಪಟ್ಟಣದ ಜನರಿಗೆ ಕುಡಿಯಲು, ಹಾಗೂ ಸುತ್ತ ಮುತ್ತಲಿನ ಸಾವಿರಾರು ಎಕರೆ ಕೃಷಿ ಚಟುವಟಿಕೆಗಳಿಗೆ ಆಶ್ರಯ ಎನಿಸಿಕೊಂಡಿದೆ.
ಈ ಕೆರೆಯಲ್ಲಿ ಪ್ರಸ್ತುತ ನೀರು ಸಂಗ್ರಹಕ್ಕೆ ಕೊಡಲೆ ದುರಸ್ತಿ ಕಾಮಗಾರಿ ಮತ್ತು ಮುಂದಿನ ದಿನಗಳಲ್ಲಿ ಡ್ಯಾಮ ಮಾದರಿಯಲ್ಲಿ ಕೆರೆಯ ಸುತ್ತ ಕಾಮಗಾರಿ ಕೈಗೊಳ್ಳಬೇಕು, ಮಹಾಪೂರಕ್ಕೆ ಕೊಚ್ಚಿಕೊಂಡು ಹೋಗಿರುವ ರೈತರ ಕೃಷಿ ಭೂಮಿಗಳಿಗೆ ಪರಿಹಾರ ನೀಡಬೇಕು ಎಂದು 'ಸಮಗ್ರ ಕೇರೆ ನೀರು ಬಳಕೆದಾರರ ಸಂಘ'ದ ಅಧ್ಯಕ್ಷ ಶಿವಾಜಿ ಡೊಳ್ಳಿನ ತಿಳಿಸಿ ಸಂಘದಿಂದ ನೀರಾವರಿ ಇಲಾಖೆಯ ಅಭಿಯಂತರರಾದ ವಿನಾಯಕ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಇನಾಮದಾರ.ಮಂಜುನಾಥ ಮೀಟಗಾರ.ಮಹಾಬಲೇಶ್ವರ ಕಲ್ಲೂರ.ಜಮಿಲ ಮುನವಳ್ಳಿ. ಹಾಗೂ ಇನ್ನಿತರರು ಇದ್ದರು.
Kshetra Samachara
05/08/2021 10:45 am