ಕಲಘಟಗಿ:ಮಾಜಿ ಸಚಿವ ಸಂತೋಷ ಲಾಡ್ ಶಾಸಕರಾಗಿದ್ದಾಗ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಸ್ ಘಟಕದ ಮಂಜೂರಿಗೆ ಶ್ರಮಿಸಿದ್ದರು ಎಂದು ಶಾಸಕ ಸಿ ಎಂ ನಿಂಬಣ್ಣವರ ಲಾಡ್ ಅವರ ಕೆಲಸವನ್ನು ಸ್ಮರಿಸಿದರು.
ಅವರು ಬಹು ನಿರೀಕ್ಷಿತ ಪಟ್ಟಣದಲ್ಲಿನ ನೂತನ ಬಸ್ ಘಟಕದ ಉದ್ಘಾಟನೆಯ ಸಮಾರಂಭದಲ್ಲಿ ಶಾಸಕ ಪ್ರಸ್ತಾವಿಕವಾಗಿ ಮಾತನಾಡಿ,ಮಾಜಿ ಸಚಿವ ಸಂತೋಷ ಲಾಡ್ ಅವರಿಗೆ ಕಾರ್ಯಕ್ರಮಕ್ಕೆಬರುವಂತೆ ತಾವು ದೂರವಾಣಿ ಕರೆ ಮಾಡಿದ್ದು,ಅವರು ತಮ್ಮ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ ಎಂದರು.
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ,ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್,ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ ಎಸ್ ಪಾಟೀಲ,ಎಸ್ ಐ ಚಿಕ್ಕನಗೌಡರ ಹಾಗೂ ಜನಪ್ರತಿನಿಧಿಗಳು,ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/01/2021 06:08 pm