ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮುಗಿಯದ ರೈಲ್ವೆ ಬ್ರಿಡ್ಜ್ ಕಾಮಗಾರಿ; ಜನರ ಕೂಗಿಗೆ ಡೋಂಟ್ ಕೇರ್ !

ಕುಂದಗೋಳ: ಇದು ರೈಲ್ವೆ ಇಲಾಖೆಯ ಆಮೆ ವೇಗದ ಕಥೆಯೋ, ಜನಪ್ರತಿನಿಧಿಗಳ ನಿರಾಸಕ್ತಿಯೋ ಅಥವಾ ಮಸಾರಿ ಪ್ಲಾಟ್ ನಿವಾಸಿಗಳಿಗೆ ತಟ್ಟಿದ ಶಾಪವೋ ಗೊತ್ತಿಲ್ಲ.

ಆದ್ರೇ, ಇಲ್ಲೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ಜನರಿಗೆ ಸಮಸ್ಯೆ ಆಗಿ ಪರಿಣಮಿಸಿದೆ.

ಹೌದು... ಕುಂದಗೋಳ ಪಟ್ಟಣದಿಂದ ಎಪಿಎಂಸಿ ಮಾರ್ಗವಾಗಿ ಗುಡೇನಕಟ್ಟಿ, ಇತ್ತ ಯರಗುಪ್ಪಿ ಸಂಪರ್ಕ ಕಲ್ಪಿಸುವ ಮಾರ್ಗದ ರೈಲ್ವೆ ಬ್ರಿಡ್ಜ್ ಕಾಮಗಾರಿ ಕಳೆದ ಮೂರು ವರ್ಷಗಳಿಂದಲೂ ಮುಕ್ತಾಯಗೊಂಡಿಲ್ಲ!

ಈ ಪರಿಣಾಮ ಹತ್ತು ಹಳ್ಳಿಗರಿಗೆ ಮುಖ್ಯವಾಗಿ ಮಸಾರಿ ಪ್ಲಾಟ್ ನಿವಾಸಿಗಳಿಗೆ ಈ ಕಚ್ಚಾ ರಸ್ತೆ ಹಾಗೂ ರೈಲ್ವೆ ಹಳ್ಳಿ ದಾಟಿ ಓಡಾಟ ಮಾಡುವ ದುಸ್ಥಿತಿ ಏರ್ಪಟ್ಟಿದೆ. ಈ ಬಗ್ಗೆ ಸಾರ್ವಜನಿಕರು ಎಷ್ಟೇ ಕೂಗು ಹಾಕಿದ್ರೂ ಅದು ಆಡಳಿತ ವ್ಯವಸ್ಥೆ ಹಾಗೂ ರೈಲ್ವೆ ಇಲಾಖೆ ತಲುಪದೇ ಕಾಮಗಾರಿ ಮಾತ್ರ ಆಮೆ ವೇಗದಲ್ಲಿ ನಡೆಯುತ್ತಲೇ ಇದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ, ಜಾನುವಾರು ಓಡಾಟಕ್ಕೂ ರೈಲು ಬರುವ ಭೀತಿ ನಡುವೆಯೇ ಸಂಚರಿಸ ಬೇಕಿದೆ. ಕಾಮಗಾರಿ ಹೇಗಿದೆ ? ಯಾವ ಹಂತದಲ್ಲಿದೆ ? ಜನರ ಸಮಸ್ಯೆ ಏನು ? ಎಂಬುದರ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ಜನರ ಜೊತೆ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...

Edited By : Somashekar
Kshetra Samachara

Kshetra Samachara

01/09/2022 11:07 pm

Cinque Terre

87.11 K

Cinque Terre

5

ಸಂಬಂಧಿತ ಸುದ್ದಿ