ಹುಬ್ಬಳ್ಳಿ: ಇಷ್ಟು ದಿನ ಚುನಾಯಿತ ಪಾಲಿಕೆ ಸದಸ್ಯರು ಅಧಿಕಾರಕ್ಕೆ ಕೋರ್ಟ್ ಮೊರೆ ಹೋಗಿದ್ದನ್ನು ನೋಡಿದ್ದೇವೆ. ಆದರೆ ಈಗ ಪಾಲಿಕೆಯ ನಿರ್ಧಾರವನ್ನು ಖಂಡಿಸಿ ಪ್ರತಿಷ್ಠಿತ ಸಂಸ್ಥೆಯೊಂದು ಕೋರ್ಟ್ ಮೆಟ್ಟಿಲು ಏರಲು ನಿರ್ಧಾರ ಮಾಡಿದೆ. ಅಷ್ಟಕ್ಕೂ ಯಾವುದು ಆ ಸಂಸ್ಥೆ...? ಕೋರ್ಟ್ ಮೆಟ್ಟಿಲೇರಲು ಸಿದ್ದವಾಗಿದ್ದಾದರೂ ಯಾಕೆ ಅಂತೀರಾ ಈ ಸ್ಟೋರಿ ನೋಡಿ..
ಈಗಾಗಲೇ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಇದರ ನಡುವೆ ಆ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳದ ಶಾಕ್ ನೀಡಿದೆ. ಇದರ ವಿರುದ್ಧ ಅಲ್ಲಿನ ಚೇಂಬರ್ ಆಫ್ ಕಾಮರ್ಸ್ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬಿಸಲು ಸಿದ್ದವಾಗಿದೆ. ಹೌದು, ಹು-ಧಾ ಮಹಾನಗರ ಪಾಲಿಕೆ ರಾಜ್ಯದ ಅತಿದೊಡ್ಡ ಮಹಾನಗರ ಪಾಲಿಕೆಯ ಹೆಗ್ಗಳಿಕೆ ಪಾತ್ರವಾಗಿದೆ. ಈ ಮಹಾನಗರ ಪಾಲಿಕೆ ಆಸ್ತಿ ತೆರಿಗೆಯನ್ನು ಶೇ.37 ರಿಂದ ಶೇ.900 ರಷ್ಟು ಹೆಚ್ಚಳ ಮಾಡಿದ್ದು, ಇದು ಸಂಪೂರ್ಣ ಅವೈಜ್ಞಾನಿಕ ಹಾಗೂ ಜನತೆಗೆ ಮಾಡುತ್ತಿರುವ ಅನ್ಯಾಯ ಎಂಬುದು ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಲವು ದಿನಗಳಿಂದ ಪ್ರತಿಪಾದಿಸುತ್ತಾ ಬರುತ್ತಿದೆ. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ.
ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಮಹೇಂದ್ರ ಲದ್ದಡ ಹಾಗೂ ಈಗಿನ ಅಧ್ಯಕ್ಷ ವಿನಯ ಜವಳಿ ಈಗಾಗಲೇ ತಮ್ಮ ತಕರಾರು ದಾಖಲಿಸಿ, ಹೆಚ್ಚಳ ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದಾರೆ. ಅಲ್ಲದೇ ಆಂತರಿಕ ಸಭೆಗಳಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದು ಉಂಟು. ಆದರೆ ಸರ್ಕಾರಕ್ಕೆ ಅವೈಜ್ಞಾನಿಕ ಆಸ್ತಿ ತೆರಿಗೆ ಕುರಿತು ಮನವರಿಕೆ ಕೆಲಸ ಮಾಡಿದರು ವಿಫಲವಾದ ಹಿನ್ನೆಲೆ ಅನಿವಾರ್ಯವಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುತ್ತಿದೆ. ಆದರೆ ಈ ತೆರಿಗೆ ಹೆಚ್ಚಳದ ಕುರಿತು ಪಾಲಿಕೆ ಆಯುಕ್ತರನ್ನು ಕೇಳಿದರೇ ಅವರು ಹೇಳುವುದು ಹೀಗೆ..
ಒಟ್ಟಿನಲ್ಲಿ ಮೊದಲೇ ಕೊರೊನಾ ಲಾಕ್ ಡೌನ್ ನಂತಹ ಪರಿಸ್ಥಿತಿಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಜನಕ್ಕೆ ಬೆಲೆ ಏರಿಕೆ ಬಿಸಿ ಗಾಯದ ಮೇಲೆ ಬರೆ ಎಳೆದಿತ್ತು. ಇದೀಗ ಪಾಲಿಕೆಯು ತನ್ನ ಆಸ್ತಿ ತೆರಿಗೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ಏರಿಸಿದ್ದು, ಸಾರ್ವಜನಿಕ ಜನಜೀವನಕ್ಕೆ ಹೊಡೆತ ಬಿದ್ದಂತಾಗಿದ್ದು, ಸರ್ಕಾರ ಹಾಗೂ ನ್ಯಾಯಾಲಯ ಸೂಕ್ತ ಆದೇಶದ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಿದೆ.
Kshetra Samachara
28/04/2022 02:07 pm