ಅಳ್ನಾವರ: ಗ್ರಾಮೀಣ ಪ್ರದೇಶದಲ್ಲೂ ಇ-ಲೈಬ್ರರಿಯ ಪರಿಕಲ್ಪನೆ, ಸೋಲಾರ್ ಬೀದಿ ಬೀದಿಗಳ ಅಳವಡಿಕೆ, ಸೇರಿದಂತೆ ಇತರ ಮೂಲ ಸೌಕರ್ಯಗಳನ್ನು ಉನ್ನತೀಕರಿಸಲು ರಾಜ್ಯ ಸರ್ಕಾರವು ಜಿಲ್ಲೆಯಲ್ಲಿ 17 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
75 ನೇ ಸ್ವಾತಂತ್ರ್ಯದ 'ಅಮೃತ ಮಹೋತ್ಸವ' ಸವಿ ನೆನಪಿಗಾಗಿ 'ಅಮೃತ 'ಗ್ರಾಮ ಪಂಚಾಯತ್ ಯೋಜನೆಗೆ ತಾಲೂಕಿನ ' ಬೆಣಚಿ' ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಗ್ರಾಮಗಳ ಅಭಿವೃದ್ಧಿಗಾಗಿ ಸುವರ್ಣ ಗ್ರಾಮ, ಮುಖ್ಯಮಂತ್ರಿಗಳ ಗ್ರಾಮ ಯೋಜನೆ ಸೇರಿದಂತೆ ವಿವಿಧ ರೀತಿಯ ಯೋಜನೆಯ ಪ್ರಯೋಜನ ಪಡೆದಿರುವ ಗ್ರಾ.ಪಂಗಳನ್ನು ಹೊರತು ಪಡಿಸಿ, ಹಿಂದಿನ ಯೋಜನೆಗಳಿಗೆ ಸೇರದೆ ಇರುವ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಗ್ರಾಪಂ ಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.
ಯೋಜನೆ ವಿಶೇಷ: ಈ ಯೋಜನೆಯಲ್ಲಿ ಆಯ್ಕೆಗೊಂಡ ಗ್ರಾ.ಪಂ ಗೆ 25 ಲಕ್ಷ ರೂ ವಿಶೇಷ ಅನುದಾನ ನೀಡಲಾಗುವುದು. ಯೋಜನೆಯ ಇ-ಲೈಬ್ರರಿಯ ಪರಿಕಲ್ಪನೆ ಹೊಂದಿದ್ದು, ಸೋಲಾರ್ ಬೀದಿ ದೀಪಗಳ ಅಳವಡಿಕೆ,ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು,ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ತ್ಯಾಜ್ಯ ನೀರು ವೈಜ್ಞಾನಿಕ ವಿಸರ್ಜನೆ ಗ್ರಾ.ಪಂ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ್ ಉದ್ಯಾನಗಳ ನಿರ್ಮಾಣ ಹಾಗೂ ಗ್ರಾ ಪಂ ಗಳ ಗ್ರಂಥಾಲಯಗಳನ್ನು ಡಿಜಿಟಲೀಕರಣ ಗೊಳಿಸಲು ಉದ್ದೇಶಿಸಲಾಗಿದೆ.
ಬೆನಚಿ ಗ್ರಾ ಪಂ 'ಅಮೃತ ಗ್ರಾಮ ಪಂಚಾಯಿತಿ' ಗೆ ಆಯ್ಕೆ ಯಾಗಿರುವುದಕ್ಕೆ ಗ್ರಾ ಪಂ ಅಧ್ಯಕ್ಷ 'ಸಂದೀಪ ಪಾಟೀಲ'
ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
Kshetra Samachara
16/10/2021 01:48 pm