ಹುಬ್ಬಳ್ಳಿ: ತೋಳನಕೆರೆಗೆ ಭೇಟಿ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ 15.57 ಕೋಟಿ ವೆಚ್ಚದಲ್ಲಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನೆಡೆಸಿದರು.
ಮಕ್ಕಳು ವೃದ್ಧರನ್ನು ಗಮನದಲ್ಲಿ ಇಟ್ಟುಕೊಂಡು ಉದ್ಯಾನವನಗಳನ್ನು ನಿರ್ಮಿಸಿ. ಗುಣಮಟ್ಟದ ಪ್ಲೇಯರ್ಸ್ ಅಳವಡಿಸಬೇಕು. ಕೆರೆಯ ನೈಸರ್ಗಿಕ ಪರಿಸರ ಕಾಪಾಡಿ, ವಲಸೆ ಹಕ್ಕಿಗಳು ಆವಾಸ ಸ್ಥಾನ ರಕ್ಷಣೆ ಆಗಬೇಕು. ಉದ್ಯಾನವನ ಅತಿಕ್ರಮಣ ಹಾಗೂ ಅನಧಿಕೃತ ಪ್ರವೇಶ ಮಾಡದಂತೆ ಸುತ್ತಲೂ ಎತ್ತರದ ಕಾಂಪೌಡ್ ನಿರ್ಮಿಸಬೇಕು. ಯಾವುದೇ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದರು.
ಈ ಸಂದರ್ಭದಲ್ಲಿ ರಾಮಲಿಂಗೇಶ್ವರ ನಗರ ವಿಮಾನ ನಿಲ್ದಾಣದ ಹಿಂಭಾಗದ ಪ್ರದೇಶದಿಂದ ಆಗಮಿಸುವ ಚರಂಡಿ ನೀರು ನೇರವಾಗಿ ಕೆರೆಗೆ ಸೇರುವುದನ್ನು ಗಮನಿಸಿದ ಸಚಿವರು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದರು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆಯನ್ನು ಅಭಿವೃದ್ಧಿ ಪಡಿಸಿದರು, ಚರಂಡಿ ನೀರು ಕೆರೆಗೆ ಸೇರಿತ್ತಿದೆ ಎಂದರೆ ಏನು ಅರ್ಥ. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ಒಳಚರಂಡಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಮನ್ವಯದಿಂದ ಕಾರ್ಯನಡೆಸಬೇಕು. ಒಂದು ತಿಂಗಳ ಒಳಗಾಗಿ ಇದನ್ನು ಸರಿಪಡಿಸಬೇಕು. ಮುಂದಿನ ಭೇಟಿಯ ವೇಳೆ ಇದನ್ನು ಮೊತ್ತಮ್ಮೆ ಗಮನಿಸಿತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸಂಗೀತ ಕಾರಂಜಿ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ, ಕೊಳಚೆ ನೀರು ಶುದ್ದೀಕರಣ ಘಟಕಗಳನ್ನು ಸಚಿವರು ವೀಕ್ಷಿಸಿದರು.
Kshetra Samachara
24/11/2020 09:18 pm