ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಆ ಇಲಾಖೆ ಈ ಇಲಾಖೆ ನೆಪ ಬಿಡ್ರೀ ನೀರು ಹೊರಗ ಹಾಕ್ರೀ ಶಾಸಕಿ ಖಡಕ್ ವಾರ್ನಿಂಗ್

ಪಬ್ಲಿಕ್ ನೆಕ್ಸ್ಟ್ : ಶ್ರೀಧರ ಪೂಜಾರ

ಕುಂದಗೋಳ : ಕುಂದಗೋಳ ಪಟ್ಟಣದ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಸತತವಾಗಿ ಎರೆಡು ವರ್ಷಗಳಿಂದ ಕಲುಷಿತ ನೀರು ಸಂಗ್ರಹವಾಗಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಕಟ್ಟಡದ ಕೆಳಗೆ ಸಂಗ್ರಹವಾದ ನೀರಿನಲ್ಲಿ ವಿವಿಧ ಕ್ರೀಮಿಗಳು ಸೇರಿದಂತೆ ಹಾವುಗಳು ವಾಸಿಸುತ್ತಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಕಟಿಸಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.

ಈ ಕುರಿತಂತೆ ಇಂದು ಶಾಸಕಿ ಕುಸುಮಾವತಿ ಶಿವಳ್ಳಿ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು ಬಳಿಕ ಸ್ಥಳದಲ್ಲಿದ್ದ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ನೀರನ್ನು ಹೊರ ಹಾಕುವ ಬಗ್ಗೆ ತರಾಟೆಗೆ ತೆಗೆದುಕೊಂಡು ಆ ಇಲಾಖೆ ಈ ಇಲಾಖೆ ನೆಪ ಬಿಡಿ ಕೆಲ್ಸಾ ಮಾಡಿ ಎಂದು ಎಚ್ಚರಿಸಿದರು.

ಬಳಿಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸದ್ಯ ಸಂಕೀರ್ಣ ಕಟ್ಟಡದಲ್ಲಿನ ನೀರು ಹೊರಹಾಕಿ ನಂತರದಲ್ಲಿ ಶಾಶ್ವತ ಪರಿಹಾರಕ್ಕಾಗಿ ಕಂಡುಕೊಳ್ಳಿ ಆ ನಿಟ್ಟಿನಲ್ಲಿ ಬೇಕಾದ ಸಹಾಯ ನನ್ನಿಂದ ಪಡೆದುಕೊಳ್ಳಿರಿ ಎಂದು ತಿಳಿಸಿದರು.

Edited By :
Kshetra Samachara

Kshetra Samachara

08/10/2020 07:30 pm

Cinque Terre

34.54 K

Cinque Terre

3

ಸಂಬಂಧಿತ ಸುದ್ದಿ