ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಲ್ಲಿ ಅವೈಜ್ಞಾನಿಕ ಯೋಜನೆ ಜಾರಿ ಕುರಿತು ಅಧಿವೇಶನದಲ್ಲಿ ಚರ್ಚೆ! ಹೋರಟ್ಟಿ

ಹುಬ್ಬಳ್ಳಿ- ಶಿಕ್ಷಕರಿಗೆ ಮಾರಕವಾದ ವಿದ್ಯಾಗಮ ಯೋಜನೆಯ ಸಾಧಕ ಭಾದಕ, ಶಿಕ್ಷಣ ಇಲಾಖೆಯಲ್ಲಿ ಅವೈಜ್ಞಾನಿಕ ಯೋಜನೆ ಜಾರಿ, ಅನುದಾನಿತ ಖಾಸಗಿ ಶಾಲಾ ಶಿಕ್ಷಕರ ಬೇಡಿಕೆ ಸೇರಿದಂತೆ ಮುಂತಾದ ವಿಷಯಗಳ ಕುರಿತು ಸೆ.21 ರಂದು ನಡೆಯಲಿರುವ ವಿಧಾನ ಸಭೆ ಅಧಿವೇಶನದಲ್ಲಿ ಸುದೀರ್ಘ ಚರ್ಚೆಗೆ ಒತ್ತಾಯಿಸುತ್ತೇನೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹು ನಿರೀಕ್ಷಿತ ಮುಂಗಾರು ಅಧಿವೇಶನ ಸೆಪ್ಟೆಂಬರ್ 21 ರಂದು ನಡೆಯಲಿದ್ದು, ಖಾಸಗಿ, ಅನುದಾನ ಶಿಕ್ಷಣ ಸಂಸ್ಥೆಗಳು ಎದುರುಸುತ್ತಿರುವ ಸಮಸ್ಯೆ, ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಹಾಗೂ ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ವಿವಿಧ ಅಭಿವೃದ್ಧಿ ಕಾರ್ಯ ಜಾರಿಗೆ ಕುರಿತು ಧ್ವನಿ ಎತ್ತಲಾಗುವುದು ಎಂದರು. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕೇಲ ಕಚೇರಿ ಸ್ಥಳಾಂತರ ಕುರಿತಾದ ಬೇಡಿಕೆ ಮುಂತಾದ ಸಮಸ್ಯೆ, ವಿಷಯ ಮಂಡನೆ ಕುರಿತಾಗಿ ಈಗಾಗಲೇ ನಮ್ಮ ನಾಯಕರ ಜೊತೆ ಚರ್ಚೆ ಮಾಡಿದ್ದು ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡುವಂತೆ ಎಂದರು...

Edited By : Nagesh Gaonkar
Kshetra Samachara

Kshetra Samachara

19/09/2020 05:51 pm

Cinque Terre

43.24 K

Cinque Terre

2

ಸಂಬಂಧಿತ ಸುದ್ದಿ