ಹುಬ್ಬಳ್ಳಿ: ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಆದೇಶ ವಿಚಾರದ ಹಿನ್ನೆಲೆಯಲ್ಲಿ, ರಾಷ್ಟ್ರಧ್ವಜ ವಿಚಾರದಲ್ಲಿ ಡೋಂಗಿ ರಾಜಕೀಯ ಬೇಡ, ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲಿ ನಮ್ಮ ರಾಜಕೀಯವಿಲ್ಲವೆಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆರ್.ಎಸ್.ಎಸ್‌ನ ಕೆಲವರು ರಾಷ್ಟ್ರಧ್ವಜ ಬೇಡ ಅಂದಿದ್ದರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ ವಿರೋಧ ಮಾಡಿದ್ದರು. ಆರ್.ಎಸ್.ಎಸ್ ನವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ..?
ಇನ್ನು ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಇವಾಗ ಎನ್ ಡಿಎ ತೊರಿದಿದ್ದಾರೆ. ಅವರಿಬ್ಬರ ಮನಸ್ಥಾಪದ ಬಗ್ಗೆ ನಂಗೆ ಗೊತ್ತಿಲ್ಲ. ಅವರೊಬ್ಬ ಸಮಾಜವಾದಿ ಹಿನ್ನಲೆದವರು. ಕೋಮುವಾದ ಪಕ್ಷ ಬಿಟ್ಟಿದ್ದು ಒಳ್ಳೆಯದು. ರಾಜ್ಯದಲ್ಲಿ ಮೂರನೇಯವರಾದ್ರು ಬರಲಿ ನಾಲ್ಕನೇಯವರಾದ್ರು ಬರಲಿ ನಮಗೇನು ಸಂಬಂಧವಿಲ್ಲ.
ಬಿಎಸ್‌ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ, ಆದ್ರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ. ಟ್ವಿಟ್ ಮಾಡಿದವರನ್ನ ಕೇಳಿ, ನಾನಂತು ಟ್ವಿಟ್ ಮಾಡಿಲ್ಲ. ಚಾಮರಪೇಟೆಯ ಈದ್ಗಾ ಮೈದಾನ ವಿವಾದದ ಬಗ್ಗೆ ನಂಗೆ ಗೊತ್ತಿಲ್ಲ. ಅದರ ಕಾನೂನು ವಿವಾದ ಮಾಹಿತಿ ಇಲ್ಲ. ಅಲ್ಲಿ ಮೊದಲಿನಂತೆ ಏನ್ ನಡಿತಿತ್ತು ಗೊತ್ತಿಲ್ಲ.
ಬಾದಾಮಿಯಲ್ಲಿ ನಾನು ಸ್ಪರ್ಧಿಸೋದು ಇನ್ನು ನಿರ್ಧಾರಿಸಿಲ್ಲ, ಅಲ್ಲೆಲ್ಲಾ ಎಲೆಕ್ಷನ್‌ಗೆ ನಿಲ್ಲೊಕ್ಕಾಗುತ್ತಾ...? ಸದ್ಯ ಬಾದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳ್ತೀನಿ ಎಂದರು.
Kshetra Samachara
10/08/2022 02:42 pm