ಹುಬ್ಬಳ್ಳಿ : ನಮ್ಮ ದೇಶದ ರಾಷ್ಟ್ರಧ್ವಜಕ್ಕೆ ತನ್ನದೆ ಆದ ಗೌರವವಿದೆ. ಈ ಗೌರವಕ್ಕೆ ಅಪಮಾನ ತರುವಂತ ಕೆಲಸಕ್ಕೆ ಕೇಂದ್ರ ಸರ್ಕಾರ ಈಗ ಕೈ ಹಾಕಿದೆ. ನರೇಂದ್ರ ಮೋದಿ ಸರ್ಕಾರ ರಾಷ್ಟ್ರಧ್ವಜವನ್ನು ಬೇಕಾದ ಬಟ್ಟೆಯಲ್ಲಿ ಧ್ವಜ ಮಾಡಿ ಎಂದಿದೆ. ಇದರಿಂದಾಗಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದರೆ, ಕೈಮಗ್ಗಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಬಂದೋದಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಧ್ವಜದ ಉಳಿವಿಗಾಗಿ ರಾಷ್ಟ್ರ ನಾಯಕರು ಮುಂದಾಗಿದ್ದಾರೆ.
ದೇಶೀಯತೆ, ಸ್ವಾವಲಂಬನೆಯ ಹಿನ್ನೆಲೆಯಲ್ಲಿ ಖಾದಿಯ ಬಗ್ಗೆ ಕನಸು ಕಂಡಿದ್ದು, ಮಹಾತ್ಮಾ ಗಾಂಧಿ. ದೇಶಾದ್ಯಂತ ಖಾದಿ ಗ್ರಾಮೋದ್ಯೋಗಕ್ಕೆ, ಅದರಲ್ಲೂ ಮುಖ್ಯವಾಗಿ ಖಾದಿ ಬಟ್ಟೆಯಲ್ಲಿಯೇ ನಿರ್ದಿಷ್ಟ ಮಾನದಂಡದೊಂದಿಗೆ ರಾಷ್ಟ್ರದ ನಿರ್ಮಾಣವಾಗಬೇಕು ಎಂಬ ಧ್ವಜ ನೀತಿ ಜಾರಿಗೆ ಬಂತು. ಆದರೆ, ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಹೊಸ ಧ್ವಜ ನೀತಿ ಹೊರಡಿಸಿದೆ. ಇದು ಕೇಂದ್ರ ಸರ್ಕಾರ ಖಾದಿ, ರಾಷ್ಟ್ರಧ್ವಜ ತಯಾರಿಸುವವರ ಅಸ್ತಿತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ. ನಮ್ಮ ಹೆಮ್ಮೆಯ ತ್ರಿವರ್ಣಧ್ವಜದ ಬಟ್ಟೆಯನ್ನು ಸಿದ್ಧಪಡಿಸುವುದು ಅಪರೂಪದ ಕಾಯಕ.
ಧಾರವಾಡದ ಗರಗ ಹಾಗೂ ಹೆಬ್ಬಳ್ಳಿ, ಬಾಗಲಕೋಟೆ ಜಿಲ್ಲೆಯಲ್ಲಿರುವ ತುಳಸಿಗೇರಿಯ ಖಾದಿ ಕೇಂದ್ರ, ಸೀಮಿಕೇರಿ, ಜಾಲಿಹಾಳಗಳಲ್ಲಿರುವ ಖಾದಿ ಕೇಂದ್ರಗಳಲ್ಲಿ ರಾಷ್ಟ್ರಧ್ವಜ ನೇಯುತ್ತಾರೆ. ಇವರು ನೇಯ್ದ ಬಟ್ಟೆಗೆ ಪವಿತ್ರ ರಾಷ್ಟ್ರಧ್ವಜದ ರೂಪನೀಡುತ್ತಿರುವುದು ಹುಬ್ಬಳ್ಳಿಯ ಬೆಂಗೇರಿ. ಕೇಂದ್ರ ಸರ್ಕಾರದ ಮಾಡಿದ ಎಡವಟ್ಟಿಗೆ ಈಗ ಕರ್ನಾಟಕ ಖಾದಿ ಗ್ರಾಮೋದ್ಯೋಗದಲ್ಲಿ ಇಂಥದ್ದೊಂದು ಶ್ರೇಷ್ಠ ಕಾಯಕ ಮಾಡುತ್ತಿರುವ 1500ಕ್ಕೂ ಹೆಚ್ಚು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಹೋರಾಟ ದೆಹಲಿಯನ್ನು ತಲುಪಿದ್ದು, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇನ್ನೂ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಸದುದ್ದೇಶದಿಂದ ರಾಹುಲ್ ಗಾಂಧಿ ಭೇಟಿ ನೀಡಿ ಕಾರ್ಮಿಕರ ಅಹವಾಲು ಸ್ವೀಕರಿಸಿದ್ದಾರೆ. ಅಲ್ಲದೇ ಇಲ್ಲಿ ಖಾದಿ ಧ್ವಜ ತಯಾರಿಕೆ ಬಗ್ಗೆ ಕೂಡ ಮಾಹಿತಿ ಪಡೆದಿದ್ದು, ಈ ಬಗ್ಗೆ ಇಲ್ಲಿನ ಸಿಬ್ಬಂದಿ ಏನ ಹೇಳ್ತಾರೆ ಕೇಳಿ.
ಒಟ್ಟಿನಲ್ಲಿ ಇಂತಹದೊಂದು ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದ್ದು, ಇನ್ನಾದರೂ ಸರ್ಕಾರ ಇಂತಹ ನಿರ್ಧಾರವನ್ನು ಕೈ ಬಿಟ್ಟು ದೇಶಿಯ ಪರಂಪರೆಯನ್ನು ಕಾಪಾಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/08/2022 02:31 pm