ಹುಬ್ಬಳ್ಳಿ: ಹಗಲು-ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನೀವು ಏನು ಮಾಡುತ್ತಿದ್ದಿರಿ. ನಾನು ಯಾವತ್ತು ಪಾಲ್ತು ಭಾಷಣ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ನಡೆದ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತಾನಾಡಿದ ಅವರು, ಮೋದಿಯವರು ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ಬಡವರಿಗೋಸ್ಕರ ವಿವಿಧ ಬಗೆಯಲ್ಲಿ ಸ್ಕೀಮ್ ಮಾಡಿದ್ದಾರೆ. ಎಲ್ಲರೂ ಉಪಯೋಗ ಮಾಡಿಕೊಳ್ಳಿ ಎಂದರು.
ಲಕ್ಷಾಂತರ ಬಡ ಕುಟುಂಬಕ್ಕೆ ನಮ್ಮ ಸರಕಾರ ವಿದ್ಯುತ್ ಫ್ರೀ ನೀಡಲಾಗಿದೆ. ನೂರಾರು ಯೋಜನೆ ತಂದಿದ್ದಾರೆ. ಇನ್ನು ಬಿಜೆಪಿಯಲ್ಲಿ ಕೆಲವು ನಾಯಕರು ಪೋಸ್ ಕೊಡುತ್ತಿದ್ದಾರೆ. ಗ್ರಾಮದಲ್ಲಿ ಕೆಲವು ಜಿಲ್ಲಾ ಸಂಚಾಲಕರು ಪರಿಚಯ ಇಲ್ಲ. ಅಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಆದ್ದರಿಂದ ಅಂತವರೂ ಎಂದಿಗೂ ನಾಯಕರಾಗುವುದಿಲ್ಲ ಎಂದು ಗರಂ ಆದರು. ಅಷ್ಟೇ ಅಲ್ಲದೆ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರಿಗೆ ದೇಶದಲ್ಲಿ ಬಿಜೆಪಿ ಸರ್ಕಾರ ಎಷ್ಟೆಲ್ಲಾ ಕೆಲಸ ಮಾಡುತ್ತಿದೆ ಎಂಬುದರ ಬಗ್ಗೆ ಅರಿವು ಮೂಡಿಸಿದರು.
Kshetra Samachara
28/05/2022 08:51 am