ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೊನೆಗೂ ಧಾರವಾಡಕ್ಕೆ ಬಂತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ

ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್

ಧಾರವಾಡ: 'ಧಾರವಾಡದಲ್ಲಿಲ್ಲ ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿ' ಎಂಬ ಶೀರ್ಷಿಕೆಯಡಿ ಇತ್ತೀಚೆಗಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪ್ರಸಾರ ಮಾಡಿದ್ದ ವರದಿಗೆ ಸ್ಪಂದನೆ ದೊರೆತಿದೆ.

ಮೇ.30 ರಿಂದ ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿ ಕಾರ್ಯಾರಂಭ ಮಾಡಲಿದೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿಯ ವಾರ್ತಾ ಇಲಾಖೆಯ ನೆಲಮಹಡಿ ಕಟ್ಟಡದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರ ಜನಸಂಪರ್ಕ ಕಾರ್ಯಾಲಯವು ಮೇ.30 ರಿಂದ ಪುನಃ ಕಾರ್ಯಾರಂಭ ಮಾಡಲಿದೆ.

ಧಾರವಾಡ ಜಿಲ್ಲೆಯ ಸಾರ್ವಜನಿಕರು ಸಚಿವರ ಸಂಪರ್ಕ, ಅಹವಾಲು ಸಲ್ಲಿಕೆಗೆ ಈ ಕಚೇರಿಯನ್ನು ಸಂಪರ್ಕಿಸಬಹುದು.

ಪ್ರತಿನಿತ್ಯ ನೂರಾರು ಜನ ಸಚಿವರ ಜನಸಂಪರ್ಕ ಕಚೇರಿ ಎಲ್ಲಿದೆ ಎಂದು ಹುಡುಕಾಡಿಕೊಂಡು ಬರುತ್ತಿದ್ದರು. ಸಚಿವರಿಂದ ಆಗಬೇಕಾದ ಕೆಲಸಕ್ಕೆ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಮಸ್ಯೆ ಮೇಲೆ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿತ್ತು. ಇದೀಗ ಆ ವರದಿಗೆ ಫಲ ಸಿಕ್ಕಂತಾಗಿದೆ.

Edited By : Manjunath H D
Kshetra Samachara

Kshetra Samachara

24/05/2022 11:00 pm

Cinque Terre

27.03 K

Cinque Terre

2

ಸಂಬಂಧಿತ ಸುದ್ದಿ