ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದಲು ಈಗಾಗಲೇ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ 9 ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ಹಲವಾರು ಬಾರಿ ಮನವಿ ಕೊಡಲಾಗಿದೆ. ಆದರೆ ಯಾರಿಂದಲೂ ಸಹಕಾರ ಸ್ಪಂದನೆ ದೊರೆತಿಲ್ಲ. ಹೀಗಾಗಿ ಉಚ್ಚ ನ್ಯಾಯಾಲಯದಲ್ಲಿ ಪಿ.ಐ.ಎಲ್ ಹಾಕಿದ್ದೇವೆ. ಇದೀಗ ಕೋರ್ಟ್ ಕೃಷ್ಣ ಎಂ.ಡಿ ಕಚೇರಿಯ ಜೊತೆಗೆ ಸಿಬ್ಬಂದಿಗಳನ್ನು ಈ ಕೂಡಲೇ ಆಲಮಟ್ಟಿಗೆ ಸ್ಥಳಾಂತರಬೇಕೆಂದು ಮೇ.12 ರಂದು ಆದೇಶ ನೀಡಿದೆ. ಆದರೆ ಈವರೆಗೆ ಸ್ಥಳಾಂತರಗೊಂಡಿಲ್ಲ ಎಂದು ರೈತ ಸೇನಾದ ಉತ್ತರ ಕರ್ನಾಟಕದ ಅಧ್ಯಕ್ಷ ಯಾಸೀನ್ ಜವಳಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇನ್ನು ನೀರಾವರಿ ಕೇಂದ್ರ ಕಚೇರಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಈ ಇಲಾಖೆಯನ್ನು ಸಂಪೂರ್ಣವಾಗಿ ಸಿಬಿಐ ತನಿಖೆಗೆ ಒಳಪಡಿಸಬೇಕು ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಕೇಂದ್ರ ಗೃಹಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೆ ಮರಳಿ ಉತ್ತರ ಮಾತ್ರ ಬಂದಿಲ್ಲ. ಈ ಎಲ್ಲ ನೂನ್ಯತೆಗಳನ್ನು ಸರ್ಕಾರ ಮುಂದಿನ ಹತ್ತುಗಳ ಒಳಗಾಗಿ ಸರಿಮಾಡಬೇಕು. ಇಲ್ಲದೇ ಹೋದಲ್ಲಿ ನಿರಂತರವಾಗಿ ಧಾರವಾಡ ನೀರಾವರಿ ಇಲಾಖೆಯ ಕಚೇರಿ ಮುಂದೆ ಬೇಡಿಕೆ ಈಡೇರಿಕೆಯಾಗುವವರೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
Kshetra Samachara
21/05/2022 03:15 pm