ಧಾರವಾಡ: ಅತಿಥಿ ಉಪನ್ಯಾಸಕರ ವೇತನ, ಹೆಚ್ಚಳ ಹುದ್ದೆ ಪದನಾಮ ಬದಲಾವಣೆ ಸೇರಿದಂತೆ ಇತರೆ ಬೇಡಿಕೆಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಕವಿವಿಯ ಸಹಾಯಕ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಕವಿವಿಯ ಆಡಳಿತ ಭವನದ ಎದುರು ಅನಿರ್ದಿಷ್ಟವಧಿಯ ಧರಣಿಯನ್ನು ನಡೆಸಿದ್ದಾರೆ.
ಕವಿವಿಯ ವ್ಯಾಪ್ತಿಗೆ ಬರುವ 600 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಯುಜಿಸಿ ನಿಯಮಾವಳಿಯ ಪ್ರಕಾರ ವೇತನ ಹೆಚ್ಚಿಸುವಂತೆ ವಿಶ್ವವಿದ್ಯಾಲಯ ಹಾಗೂ ಸರಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ ಇದರಿಂದ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದರು.
ಯುಜಿಸಿ ನಿಯಮಾವಳಿಯ ಪ್ರಕಾರ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಕಾನೂನು ವಿವಿ ,ಕುವೆಂಪು ವಿವಿ ಸೇರಿದಂತೆ ನೂತನವಾಗಿ ಆರಂಭವಾದ ವಿಶ್ವವಿದ್ಯಾಲಯಗಳಲ್ಲಿ ವೇತನ ನೀಡಲಾಗುತ್ತಿದೆ. ಆದರೆ ಇತಿಹಾಸ ಇರುವ ಕವಿವಿ ಯಲ್ಲಿ ಮಾತ್ರ ಯುಜಿಸಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ನಂತರ ಕುಲಪತಿ ,ಕುಲಸಚಿವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ .ಅವರ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಹಿಂದೆಯುವುದಿಲ್ಲ ಎಂದಿದ್ದಾರೆ.
ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರ, ಪ್ರೊ ಸಿ.ಎಸ್ ಪಾಟೀಲ, ಪ್ರೊ ಎನ್. ಬಸವರಾಜ ಬ್ಯಾಲ್ಯಾಳ, ಪ್ರೊ. ರಾಮಗೌಡ ಪಾಟೀಲ, ರಾಜೇಂದ್ರಕುಮಾರ ಮಠ ಇದ್ದರು.
Kshetra Samachara
01/06/2022 09:11 am