ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಶಾಲಾ ಮಕ್ಕಳಿಗೆ ಮೊಟ್ಟೆ ಸರ್ಕಾರದ ನಿಲುವಿಗೆ ಚಿಣ್ಣರರು ಹೇಳಿದ್ದೇನು ?

ಕುಂದಗೋಳ: ಮಕ್ಕಳ ಬಾಯಲ್ಲಿ ನೀರು ತರಸಿ ಸುಮ್ಮನಾದ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ನಿರ್ಧಾರದ ಬಗ್ಗೆ ಅದೆಷ್ಟೋ ಪರ ವಿರೋಧ ಚರ್ಚೆಗಳು ರಾಜ್ಯ ಮಟ್ಟದಲ್ಲಿ ಸುದ್ಧಿಯಲ್ಲಿವೆ.

ಈಗಾಗಲೇ ಸರ್ಕಾರ ಮೊಟ್ಟೆ ಕೊಡುವ ನಿರ್ಧಾರವನ್ನು ಕೆಲ ರಾಜಕೀಯ ನಾಯಕರು ಸಮರ್ಥಿಸಿದ್ರೇ, ಕೆಲ ಸ್ವಾಮೀಜಿಗಳು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರಿಗೆ ಮೊಟ್ಟೆ ಕೊಡುವ ತಿರ್ಮಾನದ ಬಗ್ಗೆ ಮತ್ತೋಮ್ಮೆ ಪರಾರ್ಮಶಿಸಿ ನಿರ್ಧಾರ ಕೈಗೊಳ್ಳಿ ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ನಿರ್ಧಾರ ಸರಿಯಲ್ಲ ಎಂದಿದ್ದಾರೆ.

ಒಟ್ಟಾರೆ ಈ ಬೇಕು, ಬೇಡಗಳ ಮಧ್ಯೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಶಾಲೆಗಳಿಗೆ ಭೇಟಿಕೊಟ್ಟು ಸ್ವತಃ ಮಕ್ಕಳನ್ನೇ ಮೊಟ್ಟೆ ಬೇಕಾ ಬೇಡ್ವಾ ? ಎಂಬ ಪ್ರಶ್ನೆ ಕೇಳಿದಾಗ ಅವರು ಹಂಚಿಕೊಂಡ ಅಭಿಪ್ರಾಯ ಹೀಗಿದೆ.

ಒಟ್ಟಾರೆ ಸರ್ಕಾರದ ನಿಲುವು ಮಠಾಧೀಶರು ಓಲುವು ಏನೇ ಇರಲಿ, ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ನಿರ್ಧಾರದಿಂದ ಅಪೌಷ್ಟಿಕತೆ ನಿವಾರಣೆ ಜೊತೆ ಕೋಳಿ ಫಾರಂ ಹಾಗೂ ಇತರೆ ಚುಟುವಟಿಕೆಗೆ ಉತ್ತೇಜನವಾಗಿ ನಿರುದ್ಯೋಗ ಸಮಸ್ಯೆ ಸಹ ಕಡಿಮೆಯಾಗಬಹುದು ಎಂಬುದು ಜನಾಭಿಪ್ರಾಯ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ

Edited By : Manjunath H D
Kshetra Samachara

Kshetra Samachara

11/12/2021 04:26 pm

Cinque Terre

26.08 K

Cinque Terre

5

ಸಂಬಂಧಿತ ಸುದ್ದಿ