ಧಾರವಾಡ: ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಹುಣಸಿಕುಮರಿ ಗ್ರಾಮದ ರಸ್ತೆಗಾಗಿ 3.50 ಕೋಟಿ ವಿಶೇಷ ಗ್ರ್ಯಾಂಟ್ ತಂದಿದ್ದೆ. ಈಗಿನ ಶಾಸಕರು ಆ ಅನುದಾನವನ್ನು ಬೇರೆ ಕಡೆ ಬಳಕೆ ಮಾಡಿಕೊಂಡಿದ್ದಾರೆ. ಹುಣಸಿಕುಮರಿ ಗ್ರಾಮಕ್ಕೆ 70 ವರ್ಷದಿಂದ ರಸ್ತೆ ಇಲ್ಲ. ಈಗಿನ ಶಾಸಕರು ವಿಶೇಷ ಗ್ರ್ಯಾಂಟ್ ತಂದು ರಸ್ತೆ ಮಾಡಿಕೊಡಬೇಕು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದಲ್ಲಿ ಇರುತ್ತಿರಲಿಲ್ಲ. ಈಗಲೂ ಇಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈ ರೀತಿ ನನ್ನ ಮೇಲೆ ಆರೋಪ ಮಾಡುವವರು ತಾವು ಕ್ಷೇತ್ರದಲ್ಲಿದ್ದುಕೊಂಡು ಏನು ಮಾಡುತ್ತಿದ್ದಾರೆ ಎಂಬುದನ್ನು ಹೇಳಲಿ. ನಮ್ಮ ಪಕ್ಷದ ಕಾರ್ಯಕರ್ತರು ಕಲಘಟಗಿ ಕ್ಷೇತ್ರದಲ್ಲಿ ಈಗಲೂ ಅಳಿಲು ಸೇವೆ ಮಾಡುತ್ತಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ ಅವರು ಪಕ್ಷದ ಅಧ್ಯಕ್ಷರಾದ ನಂತರ ಯುವಕರಲ್ಲಿ ಹೊಸ ಉತ್ಸಾಹ ಬಂದಿದೆ. ಪಕ್ಷ ಸಂಘಟನೆಗಾಗಿ ಅವರು ಸುತ್ತಾಡುತ್ತಿದ್ದಾರೆ. ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಮತ್ತೆ ಸ್ಪರ್ಧೆ ಮಾಡಲಿದ್ದೇನೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.
Kshetra Samachara
03/10/2020 08:17 pm