ಧಾರವಾಡ: ದೇಶದ ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚೆಟ್ಟಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾಡಿರುವ ಆರೋಪಕ್ಕೆ ಕೃಷಿ ವಿವಿ ಕುಲಪತಿ ಪ್ರೊ.ಮಹಾದೇವ ಚೆಟ್ಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
31 ವರ್ಷದ ಹಿಂದೆ ನೇಮಕಾತಿಯಾಗಿರುವ ವಿಷಯ ಈಗೇಕೆ ಬಂದಿದೆ. 2006ರಲ್ಲಿ ಸರ್ಕಾರದ ನಿರ್ದೇಶನದಂತೆ ನಾನು ಕುಲಪತಿ ಸ್ಥಾನಕ್ಕೆ ಅರ್ಜಿ ಹಾಕಿದ್ದೇನೆ. ಕೊರವರ ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಕೊರವರ ಅವರಿಗೂ ನನಗೂ ಯಾವುದೇ ಪರಿಚಯ ಇಲ್ಲ. ತಪ್ಪು ಮಾಹಿತಿಯಿಂದ ಅವರು ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ನಾನೂ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
Kshetra Samachara
03/10/2020 02:34 pm