ಅಣ್ಣಿಗೇರಿ: ತಾಲೂಕಿನ ಮನಕವಾಡ ಗ್ರಾಮದಲ್ಲಿ "ಅಜ್ಜನ ಸಂಭ್ರಮ" ಎಂಬ ವಿನೂತನ ಕಾರ್ಯಕ್ರಮ 8 ದಿನಗಳವರೆಗೂ ನಡೆಯಿತು.
ಇನ್ನೂ ಅಜ್ಜನ ಸಂಭ್ರಮದ ಕೊನೆಯ ದಿನದ ಸಮಾರೋಪ ಸಮಾರಂಭ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ನಡೆದವು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಕ್ಕಿಆಲೂರು ವಹಿಸಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ವಿಜಯೇಂದ್ರ ಮಾತನಾಡಿ, ಪ್ರತಿಯೊಂದು ದೇಶಕ್ಕೂ ಆತ್ಮ ಇರುತ್ತದೆ. ಅದೇ ರೀತಿ ಭಾರತ ದೇಶಕ್ಕೆ ಆತ್ಮ ಅಂದರೆ ಅಧ್ಯಾತ್ಮ ಮತ್ತು ಧರ್ಮ ಎಂದರು. ಪೂಜ್ಯ ತಂದೆಯವರಾದ ಬಿ.ಎಸ್. ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಅಗಾಧವಾದ ಪ್ರೀತಿ ವಿಶ್ವಾಸ ಇಟ್ಟು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅದೇ ರೀತಿ ನಾನು ಕೂಡ ಅಜ್ಜನ ಮಠದ ಅಭಿವೃದ್ಧಿಗಾಗಿ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಮಾತನಾಡಿದರು.
ಸಚಿವ ಮುನೇನಕೊಪ್ಪ ಅವರು ಮಾತನಾಡಿ, ಮಠದ ಅಭಿವೃದ್ಧಿಗಾಗಿ ಶಾಸಕನಾಗಿ ಅಲ್ಲ. ಸಾಮಾನ್ಯ ಭಕ್ತನಾಗಿ ಮಠದ ಅಭಿವೃದ್ಧಿ ಕೆಲಸಗಳಲ್ಲಿ ಸದಾ ನಿಮ್ಮೊಡನೆ ಇರುತ್ತೇನೆ ಹಾಗೂ ಮಠದ ಅಭಿವೃದ್ಧಿಗಾಗಿ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿಸಿ ತಂದು ಕೊಡುವುದಾಗಿ ಹೇಳಿದರು.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
14/03/2022 03:17 pm