ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಸಚಿವರ ಕಾಳಜಿಗೆ ಮರಳಿತು ಲಕ್ಷ ಲಕ್ಷ ಹಣ- ಶಂಕರ್ ಪಾಟೀಲ್ ಮುನೇನಕೊಪ್ಪ ಕಾರ್ಯ ಎಲ್ಲರಿಗೂ ಮಾದರಿ

ಅಣ್ಣಿಗೇರಿ: ಓರ್ವ ಜನಪ್ರತಿನಿಧಿ ಎಷ್ಟೇ ಬಿಜಿಯಿದ್ದರೂ ತನ್ನ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿತುಕೊಂಡು ಮುನ್ನಡೆಯುವವರು ತೀರಾ ವಿರಳ. ಆದರೆ ತನ್ನ ಕ್ಷೇತ್ರದ ಜನರ ಹಣವನ್ನ ನುಂಗಿದ್ದರ ಬಗ್ಗೆ ಸಚಿವರೇ ಕಂಡು ಹಿಡಿದು ಹೊರ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿನಲ್ಲಿ ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿಯಂಬಂತೆ ಬಿಂಬಿಸಿ ಬರೋಬ್ಬರಿ 40,55,200 ರೂಪಾಯಿ ಹಣವನ್ನ ಲಪಟಾಯಿಸಿದ್ದ. ಯಾರಿಗೂ ಗೊತ್ತಾಗದ ಹಾಗೇ ನಡೆದಿದ್ದ ವಂಚನೆಯೊಂದರ ಬಗ್ಗೆ ಸಚಿವರು ಆಸಕ್ತಿ ವಹಿಸಿದ್ದರಿಂದ ಸಂತ್ರಸ್ತರಿಗೆ ಸೇರಬೇಕಾಗಿದ್ದ ಹಣವು ಮರಳಿ ಖಜಾನೆ ಸೇರಿದೆ.

ಇದನ್ನು ಯಾರೂ ಕಂಡು ಹಿಡಿದೇ ಇಲ್ಲ. ಆದರೆ ಈ ಮಾಹಿತಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಅದೇಗೋ ಗೊತ್ತಾಗಿ. ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ತಹಶೀಲ್ದಾರ ಅಲರ್ಟ್ ಆಗಿ ಪರಿಶೀಲನೆ ನಡೆಸಿದಾಗ ವಂಚನೆ ಮಾಡಿರುವುದು ಗೊತ್ತಾಗಿದೆ. ತಕ್ಷಣವೇ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯಾವಾಗ ಎಫ್ಐಆರ್ ದಾಖಲಾಯಿತೋ, ತಕ್ಷಣವೇ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ ಮುಧೋಳ ಸಂಬಂಧಿಕರು ಎಲ್ಲ ಹಣವನ್ನೂ ಸರ್ಕಾರದ ಖಜಾನೆಗೆ ಮರಳಿಸಿದ್ದಾರೆ. ಆದರೆ ಮಂಜುನಾಥ ನಾಪತ್ತೆಯಾಗಿದ್ದಾನೆ.

ಓರ್ವ ಸಚಿವ ರಾಜ್ಯದ ವಿವಿಧ ಪ್ರದೇಶದಲ್ಲಿ ಸಂಚರಿಸುತ್ತ ಸರಕಾರದ ಕೆಲಸಗಳನ್ನ ಮಾಡುತ್ತಿದ್ದಾಗಲೂ, ತನ್ನ ಕ್ಷೇತ್ರವನ್ನ ಹೇಗೆ ನೋಡಿಕೊಳ್ಳಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಈ ಮೂಲಕ ತೋರಿಸಿಕೊಟ್ಟಿದ್ದಾರೆ. ಸರಕಾರದ ಹಣ, ಯಾರಿಗೆ ತಲುಪಬೇಕೋ ಅವರಿಗೆ ತಲುಪಲಿ ಎಂಬ ಅವರ ಆಶೋತ್ತರ ಈ ಮೂಲಕ ಈಡೇರಿದೆ.

ವರದಿ: M K ನದಾಪ್ ಹುಬ್ಬಳ್ಳಿ

Edited By : Manjunath H D
Kshetra Samachara

Kshetra Samachara

28/06/2022 10:45 pm

Cinque Terre

78.41 K

Cinque Terre

12

ಸಂಬಂಧಿತ ಸುದ್ದಿ