ಹುಬ್ಬಳ್ಳಿ: ವಿಧಾನ ಪರಿಷತ್ ನಲ್ಲಿ ಎಲ್ಲರಿಗೂ ಸಮಾಧಾನ ಪಡಿಸುವ ಸಭಾಪತಿ ವಿರುದ್ಧವೇ ಹುಬ್ಬಳ್ಳಿ ಜನರು ಅಸಮಾಧಾನ ಹೊರಹಾಕಿದ್ದಾರೆ. ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಸಭಾಪತಿ ಹಸ್ತಕ್ಷೇಪ ಆರೋಪ ಗಂಭೀರವಾಗಿ ಕೇಳಿ ಬರುತ್ತಿದೆ. ಹಾಗಿದ್ದರೇ ಅವರೆಲ್ಲರೂ ಆರೋಪ ಮಾಡಲು ಕಾರಣವಾದರೂ ಏನು..? ಸಭಾಪತಿ ಸುತ್ತ ಸುತ್ತಿಕೊಂಡಿರುವ ಆರೋಪವಾದರೂ ಏನು ಎನ್ನುವ ಇಂಟ್ರಸ್ಟಿಂಗ್ ಸ್ಟೋರಿ ತೋರಸ್ತೀವಿ ನೋಡಿ...
ಹೌದು..ಸಭಾಪತಿ ಬಸವರಾಜ ಹೊರಟ್ಟಿಯವರ ವಿರುದ್ಧವೇ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಹಸ್ತಕ್ಷೇಪದ ಕುರಿತು ಗಂಭೀರ ಆರೋಪ ಕೇಳಿಬರುತ್ತಿದೆ. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ದಿಂದ ಸಭಾಪತಿ ವಿರುದ್ಧ ಅಸಮಾಧಾನ ಬುಗಿಲೆದ್ದಿದೆ.
ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಹಲವು ದಿನಗಳಿಂದ ಅಧಿಕಾರ ದುರ್ಬಳಕೆ ಮಾಡುಕೊಂಡು ಅಂಧ ದರ್ಬಾರ್ ನಡೆಸುತ್ತಿದ್ದಾರೆ. ಅಲ್ಲದೇ ಕೋರ್ಟ್ ನಲ್ಲಿ ಆದೇಶ ಹೊರಡಿಸಿದರು. ಕೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯಕರ್ತರು ಹಾಗೂ ಅಧ್ಯಕ್ಷರು ಆರೋಪ ಮಾಡುತ್ತಿದ್ದಾರೆ.
ಇನ್ನೂ ಆ ಸಂಸ್ಥೆ ದಾವಣಗೆರೆಯ ರಾಜನಹಳ್ಳಿ ಗುರುಪೀಠಕ್ಕೆ ಸೇರಿದ್ದು, ಇದರಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯ ಬಳಸಿಕೊಂಡು ಆಸ್ತಿ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ತುಂಬಿಸಲು ಅರ್ಜಿ ಆಹ್ವಾನ ಕರೆದಿದ್ದಾರೆ. ಆದರೆ ಈ ಸಂಸ್ಥೆಗೂ ಹೊರಟ್ಟಿಯವರಿಗೂ ಯಾವುದೇ ಸಂಬಂಧವಿಲ್ಲ. ಈಗಾಗಲೇ ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ 2016 ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಟ್ರಸ್ಟ್ ಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಆದೇಶ ಆಗಿದೆ. ಆದರೆ ಹೊರಟ್ಟಿಯವರು ಅಧ್ಯಕ್ಷ ನಾನು ಎಂದು ಹೇಳಿಕೊಂಡು ಟ್ರಸ್ಟ್ ನ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನೂ ಈ ಕುರಿತು ಸಭಾಪತಿ ಬಸವರಾಜ ಹೊರಟ್ಟಿಯವರೇ ಪ್ರತಿಕ್ರಿಯೆ ನೀಡಿದ್ದು, ಕಾನೂನು ಪ್ರಕಾರ ತನಿಖೆಯಾಗಲಿ. ಕಾನೂನಿನಲ್ಲಿ ಎಲ್ಲರೂ ಸರಿ ಸಮಾನರು ಅಂತಿದ್ದಾರೆ. ಹಾಗಿದ್ದರೇ ಹೊರಟ್ಟಿಯವರ ಮಾತನ್ನೊಮ್ಮೆ ಆಲಿಸಿ..
ಒಟ್ಟಿನಲ್ಲಿ ಸಭಾಪತಿ ವಿರುದ್ಧ ಗಂಭೀರವಾದ ಆರೋಪ ಕೇಳಿ ಬರುತ್ತಿದೆ. ಕಾನೂನಿನ ಬಗ್ಗೆ ಮಾತನಾಡುವ ಸಭಾಪತಿಗಳೇ ಕೋರ್ಟ್ ಆದೇಶ ಇದ್ದರೂ ಕೂಡ ಅಧಿಕಾರಿ ಹಸ್ತಕ್ಷೇಪ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುವುದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಮಾತು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಕ್ರಮ ಜಾರಿಯಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/01/2022 07:23 pm