ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹುಬ್ಬಳ್ಳಿ ಗಲಭೆಕೋರರಿಗೆ ಕಿಟ್ ಕೊಡುವುದು ಸರಿಯಲ್ಲ; ನಲಪಾಡ್

ಧಾರವಾಡ: ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿದ ಮುಸ್ಲಿಂ ವ್ಯಕ್ತಿಗಳ ಮನೆಗೆ ಶಾಸಕ ಜಮೀರ್ ಅಹ್ಮದ್ ಅವರು ಕಿಟ್ ಕೊಡುತ್ತಿರುವುದು ಸರಿಯಲ್ಲ ಎಂದು ಯೂಥ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಹ್ಮದ್ ಹ್ಯಾರೀಸ್ ನಲಪಾಡ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಅವರು ನಮ್ಮ ಪಕ್ಷದ ಶಾಸಕರೇ ಆದರೂ ಅವರು ನಮ್ಮ ಪಕ್ಷದ ಸಮ್ಮುಖದಲ್ಲಿ ಗಲಭೆಕೋರರ ಮನೆಗಳಿಗೆ ಕಿಟ್ ಕೊಡುತ್ತಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಅವರು ಆ ಕೆಲಸ ಮಾಡಿದ್ದರೆ ಏನಾದರೂ ಮಾತನಾಡಬಹುದಿತ್ತು. ಆದರೆ, ಅದು ಅವರ ವೈಯಕ್ತಿಕ ವಿಚಾರವಾದರೂ ಅವರು ಮಾಡುವ ಕೆಲಸ ನನಗೇನೂ ಸರಿ ಎನಿಸುತ್ತಿಲ್ಲ ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/04/2022 10:17 am

Cinque Terre

89.45 K

Cinque Terre

6

ಸಂಬಂಧಿತ ಸುದ್ದಿ