ಧಾರವಾಡ: ಸರ್ಕಾರ ಮಾಡುವಾಗ ತಡೀರಿ ಅಂದೆ ಅವರು ಕೇಳಲಿಲ್ಲ, ಜೆಡಿಎಸ್ ಪಕ್ಷವನ್ನು ಮುಗಿಸುತ್ತೆವೆ ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ, ಒಂದು ದಿನವೂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಎದುರು ಬದುರು ಮಾತಾಡಿಲ್ಲ, ಕುಮಾರಸ್ವಾಮಿ ಅವರು ಸಿಎಂ ಆಗೋಕೆ ಸಿದ್ದುಗೆ ಮನಸ್ಸು ಇರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಬೀಳಲಿಕ್ಕೆ ಕಾಂಗ್ರೆಸ್ ನವರು ಮೂಲ ಕಾರಣವಾಗಿದ್ದರು. ಆ ಸರ್ಕಾರ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿದಂತಾಗಿತ್ತು. ದಿಲ್ಲಿಯಿಂದ ಕುಮಾರಸ್ವಾಮಿ ಅವರಿಗೆ ಬಿಜೆಪಿಯಿಂದ ಕರೆ ಬಂದಿತ್ತು. ಆಗ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ನೀವು ಮುಖ್ಯಮಂತ್ರಿಯಾಗಿ ಎಂದು ಆಪರ್ ಬಂದಿತ್ತು ಎಂದ ಹೊರಟ್ಟಿ, ಕಾಂಗ್ರೆಸ್ ನವರು ಕುಮಾರಸ್ವಾಮಿ ಅವರನ್ನು ಸರಿಯಾಗಿ ಆಡಳಿತ ನಡೆಸಲಿಕ್ಕೆ ಬಿಡಲಿಲ್ಲ ಎಂದರು.
Kshetra Samachara
05/12/2020 08:29 pm